ಹೈದರಾಬಾದ್‌ಗೆ ಗೆಲುವಿನ ಶುಭಾರಂಭ: ರಾಜಸ್ಥಾನ ವಿರುದ್ಧ 44 ರನ್‌ಗಳ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್‌ ತಂಡ 44 ರನ್ ಗಳ ಜಯ ಗಳಿಸಿದೆ.

ಹೈದರಾಬಾದ್‌ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 286 ರನ್ ಗಳನ್ನು ಕಲೆಹಾಕಿತು. 287 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು, 242 ರನ್‌ಗಳನ್ನು ಕಲೆಹಾಕಿ ಸೋಲು ಕಂಡಿತು.

ರಾಜಸ್ಥಾನ ಪರ ಧ್ರುವ್ ಜುರೆಲ್ 35 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್‌ಗಳನ್ನು ಸಿಡಿಸಿ 70 ರನ್‌, ಸಂಜು ಸ್ಯಾಮ್ಸನ್ 37 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ಗಳ ನೆರವಿನಿಂದ 66 ರನ್ ಕಲೆ ಹಾಕಿದರು.

ಸನ್ ರೈಸರ್ಸ್ ಪರ ಸಿಮರ್ಜೀತ್ ಸಿಂಗ್ 2 ವಿಕೆಟ್‌, ಆಡಮ್ ಝಂಪಾ, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಸನ್ ರೈಸರ್ಸ್ ತಂಡದ ಪರ ಇಶಾನ್ ಕಿಶಾನ್ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 106 ರನ್ ಗಳಿಸಿ ಮಿಂಚಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!