ರಾಜಸ್ಥಾನ ಕಾಂಗ್ರೆಸ್ ನಲ್ಲಿ ಹೈಡ್ರಾಮಾ: ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಬೆಂಬಲಿಗರ ನಡುವೆ ಹೊಡೆದಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ಥಾನ ಕಾಂಗ್ರೆಸ್ ನಲ್ಲಿ ಹೈಡ್ರಾಮಾ ಶುರುವಾಗಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್(Sachin Pilot) ಬೆಂಬಲಿಗರು ಅಜ್ಮೀರ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಸಹ-ಪ್ರಭಾರಿ ಅಮೃತಾ ಧವನ್ ಅವರು ಭಾಗವಹಿಸಲಿರುವ ಫೀಡ್ ಬ್ಯಾಕ್ ಸಭೆಗೆ ಮುಂಚಿತವಾಗಿ ಈ ಗಲಾಟೆ ನಡೆದಿದೆ. ಉಭಯ ನಾಯಕರ ಬೆಂಬಲಿಗರ ನಡುವಿನ ಘರ್ಷಣೆಯಿಂದಾಗಿ ಸಭೆಯನ್ನು ಮುಂದೂಡಲಾಯಿತು.

ಸಭೆಯಲ್ಲಿ ಆಸನ ವ್ಯವಸ್ಥೆಗೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ವಾಗ್ವಾದ ನಡೆದು ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಕರಣ್ ಸಿಂಗ್ ಹೇಳಿದರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿದ್ದು ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಪೈಲಟ್- ಗೆಹ್ಲೋಟ್ ನಡುವಿನ ಮುನಿಸು ಶಮನ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ಇವರಿಬ್ಬರ ಜಗಳ ಶುರು ಆಗಿದ್ದು ಜುಲೈ 2020ರಲ್ಲಿ. ಪೈಲಟ್ ನೇತೃತ್ವದ 19 ಶಾಸಕರ ಗುಂಪು ಗೆಹ್ಲೋಟ್ ಅವರನ್ನು ಬದಲಿಸಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಎತ್ತಿತ್ತು. ನಂತರ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!