October 15, 2026
Thursday, October 15, 2026
spot_img

ಬಂಗಾಳದಲ್ಲಿ ಮತದಾನದ ವೇಳೆ ಹೈಡ್ರಾಮಾ: ಸುವೇಂದು ಅಧಿಕಾರಿಗೆ ಮುತ್ತಿಗೆ ಹಾಕಿದ ಟಿಎಂಸಿ ಬೆಂಬಲಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ಮತದಾನವು ಬಿರುಸಿನಿಂದ ನಡೆಯುತ್ತಿದೆ. ಜನರು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಇದರ ನಡುವೆ ಕೆಲವು ಕಡೆ ಹೈಡ್ರಾಮಾವೇ ನಡೆದಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಬಂಗಾಳದ ವಿರೋಧ ಪಕ್ಷದ ನಾಯಕ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಭವಾನಿಪುರ ಮತಗಟ್ಟೆಗೆ ಪರಿಶೀಲಿಸಲು ತೆರಳಿದ್ದ ವೇಳೆ ಟಿಎಂಸಿ ಬೆಂಬಲಿಗರು ಘೇರಾವ್ ಹಾಕಿದ್ದು, ಈ ವೇಳೆ ಗುಂಪು ಘರ್ಷಣೆ ನಡೆದಿದೆ.

ಟಿಎಂಸಿ ಬೆಂಬಲಿಗರ ಗುಂಪು ಸುವೇಂದು ಅವರನ್ನು ಸುತ್ತುವರೆದು ಜೈ ಬಂಗಾಳ ಎಂಬ ಘೋಷಣೆಯನ್ನು ಕೂಗಿದ್ದು, ಈ ವೇಳೆ ಪರಿಸ್ಥಿತಿ ಸ್ವಲ್ಪ ಸಮಯದವರೆಗೆ ಉಲ್ಬಣಗೊಂಡಿತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರೊಂದಿಗೆ ಸಿಆರ್‌ಪಿಎಫ್ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿರ್ವಹಿಸಿದರು. ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

Must Read