Saturday, December 9, 2023

Latest Posts

ನನ್ನಪ್ಪನನ್ನೂ ಅಪಘಾತದಲ್ಲಿ ಕಳ್ಕೊಂಡಿದ್ದೇನೆ, ಆ ನೋವು ನನಗೆ ಗೊತ್ತು: ನಾಗಭೂಷಣ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ನಾಗಭೂಷಣ್ ಕಾರು ಅಪಘಾತಕ್ಕೆ ಒಳಗಾಗಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ನಾಗಭೂಷಣ್ ಕಾರು ಡಿಕ್ಕಿಯಾಗಿದ್ದು, ಮಹಿಳೆ ಮೃತಪಟ್ಟಿದ್ದರು, ಅವರ ಪತಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಈ ಬಗ್ಗೆ ನಾಗಭೂಷಣ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನನ್ನ ಅಪ್ಪನನ್ನೂ ನಾನು ಅಪಘಾತದಲ್ಲಿಯೇ ಕಳೆದುಕೊಂಡೆ, ಅಪಘಾತ ಮಾಡಿದ್ದು ಯಾರು ಅಂತ ಈಗಲೂ ಗೊತ್ತಿಲ್ಲ, ಆದರೆ ನಾನು ಹೀಗೆ ಮಾಡಿಲ್ಲ. ಅಪಘಾತ ಆದ ತಕ್ಷಣವೇ ಪೊಲೀಸರಿಗೆ ಆಂಬುಲೆನ್ಸ್‌ಗೆ ಕರೆ ಮಾಡಿದ್ದೇನೆ.

ಪೊಲೀಸರು ನನ್ನನ್ನು ಎಲ್ಲ ರೀತಿಯ ವಿಚಾರಣೆಗೆ ಒಳಪಡಿಸಿದ್ದಾರೆ, ಎಲ್ಲದಕ್ಕೂ ಸಹಕರಿಸಿದ್ದೇನೆ, ನಾನು ಮದ್ಯ ಸೇವನೆ ಮಾಡಿರಲಿಲ್ಲ. ತಪ್ಪು ಮಾಡಿ ಓಡಿಹೋಗಿಲ್ಲ, ನನಗೆ ನೋವು ಗೊತ್ತಿದೆ. ನನ್ನ ತಪ್ಪನ್ನು ತಿದ್ದಿಕೊಳ್ಳೋದಕ್ಕೆ ಆಗೋದಿಲ್ಲ. ಆದರೆ ನನ್ನ ಕೈಲಾದ್ದನ್ನು ಮಾಡುತ್ತೇನೆ. ಅವರ ನೋವಿನಲ್ಲಿ ನಾನು ಭಾಗಿಯಾಗಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಇದು ಹಿಟ್ ಆಂಡ್ ರನ್ ಕೇಸ್ ಅಲ್ಲ, ಆಕಸ್ಮಿಕ ಅಪಘಾತ, ಈ ಬಗ್ಗೆ ಯಾರ ಕರೆಯನ್ನು ಸ್ವೀಕರಿಸಿಲ್ಲ. ಮಹಿಳೆಯ ಕುಟುಂಬದವರ ಜೊತೆ ಮಾತನಾಡಿಲ್ಲ. ನಾನು ಏನೆಂದು ಮಾತನಾಡಿಸಲಿ ಹೇಳಿ? ಸ್ವಲ್ಪ ಸಮಯ ಬೇಕು, ಎಲ್ಲಿಗೂ ಓಡಿಹೋಗೋದಿಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!