ನಾನು ಕೂಡಲಸಂಗಮ ಭಕ್ತನಾಗಿ ಇರುವೆ : ಸಿ.ಸಿ.ಪಾಟೀಲ

ದಿಗಂತ ವರದಿ ಬಾಗಲಕೋಟೆ :

ಸಧ್ಯ ಜಿಲ್ಲೆಯಲ್ಲಿ‌ ಸುದ್ದಿಯಲ್ಲಿರುವ ಪಂಚಮಸಾಲಿ ಸಮಾಜದ ಮೂರನೇ ಪೀಠದ ಕುರಿತು ಲೋಕೋಪಯೋಗಿ‌ ಸಚಿವ ಸಿ.ಸಿ.ಪಾಟೀಲವರು ಬೆಂಬಲವೂ ವ್ಯಕ್ತಪಡಿಸಲಿಲ್ಲ ಆದರೆ ನಾನು ಕೂಡಲಸಂಗಮ ಭಕ್ತನಾಗಿ ಇರುವೆ ಎನ್ನುವ ಮೂಲಕ ಎರಡನೇ ಪೀಠದ‌ ಭಕ್ತ ಎಂಬ ರೀತಿ ಪರೋಕ್ಷವಾಗಿ ಹೇಳಿದರು.

ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು ,ಮೂರನೇ ಪೀಠದ ಉದ್ಘಾಟನೆಯಲ್ಲಿ ಭಾಗವಹಿಸುವ ಕುರಿತು ಸ್ಪಷ್ಟ ನಿರ್ಧಾರವನ್ನು ಹೇಳಲಿಲ್ಲ.
ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ : ಸಿದ್ದರಾಮಯ್ಯ ಹಿರಿಯ ರಾಜಕಾರಣಿ ಅವರ ಮೇಲೆ‌ ಗೌರವ ಇದೆ. ನಮ್ಮ ಸಂಪರ್ಕದಲ್ಲಿ ಬಿಜೆಪಿ ಯವರು ಇದ್ದಾರೆ ಎಂದು ಹೇಳಿದರೆ ಎಲ್ಲವೂ ಸತ್ಯವಲ್ಲ ನಮ್ಮ ಸಂಪರ್ಕ ದಲ್ಲಿಯೂ ಸಾಕಷ್ಟು ಜನ ಇದ್ದಾರೆ ಎನ್ನುವೆ.‌ ಸಿದ್ದರಾಮಯ್ಯ ನವರು ರಾಜ್ಯದ‌ ಜನರನ್ನು ಗೊಂದಲದಲ್ಲಿಡುವ ಕೆಲಸ ಮಾಡುತ್ತಾರೆ ಎಂದರು.

ಸಿಎಂ ಪರಮಾವಧಿ : ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿಯವರಿಗೆ ಪರಮಾವಧಿ ಇದೆ ಎಂದು ಹೇಳಿದರು.
ಉತ್ತಮ‌ ಸಚಿವನಾಗುವೆ : ಎರಡು ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಾಗಲಕೋಟೆ ಯಲ್ಲಿ ಚುರುಕಿನ ಆಡಳಿತ ನಡೆಸುವ ಮೂಲಕ ಉತ್ತಮ ಸಚಿವನೆಂದು ಎನಿಸಿಕೊಳ್ಳುವೆ. ಫೆಬ್ರವರಿ ಮೊದಲ‌ವಾರದಲ್ಲಿ ಕೆಡಿಪಿ‌ಸಭೆಯನ್ನು ನಡೆಸುವೆ ಈ ಬಗ್ಗೆ ಸಜ್ಜಾಗಲು ಡಿಸಿ,‌ಸಿಇಓ ಅವರಿಗೆ ಸೂಚಿಸಲಾಗಿದೆ. ನಂತರ‌ ಪುನರವಸತಿ ಹಾಗೂ ಪುನರ ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿ.ಪ.ಸದಸ್ಯ ಪಿ.ಎಚ್. ಪೂಜಾರ, ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ‌ ನಾವಲಗಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!