ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮೈಸೂರಿನ ಯುವಕ ಆದಿಲ್ ಖಾನ್ರನ್ನು ನಟಿ ರಾಖಿ ಸಾವಂತ್ ಮದುವೆಯಾದ ವಿಚಾರ ಕೆಲವು ದಿನಗಳಿಂದ ಎಲ್ಲೆಡೆ ಸುದ್ದಿಯಲ್ಲಿದ್ದು, ಇದರ ನಡುವೆ ಮತ್ತೊಂದು ಫನ್ನಿ ವಿಡಿಯೋ ವೈರಲ್ ಆಗಿದೆ.
ಅದೇನೆಂದರೆ ತಾವು ಈಗ ಅಪ್ಪಟ ಭಾರತೀಯ ಗೃಹಿಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಭಿಮಾನಿಯೊಬ್ಬ ರಾಖಿ ಅವರ ಬಳಿ ಬಂದು ಸೆಲ್ಫಿ (Selfie) ತೆಗೆದುಕೊಳ್ಳಲು ಮುಂದಾಗಿದ್ದ. ಆತ ರಾಖಿ ಸಾವಂತ್ ಅವರ ತೀರಾ ಸಮೀಪ ಬಂದಾಗ ರಾಖಿ, ‘ಥೋಡಾ ದೂರ್ ಸೇ ಭಾಯಿ… ಮೈ ಶಾದೀ ಶುದಾ ಹೂಂ.. (ಸ್ವಲ್ಪ ದೂರ ನಿಲ್ಲು ಅಣ್ಣ… ನಾನೀಗ ಮದುವೆಯಾದವಳು) ಎಂದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ವೈರಲ್ (Viral) ಆಗುತ್ತಲೇ ಅನೇಕ ಮಂದಿ ರಾಖಿಯ ಕಾಲೆಳೆಯುತ್ತಿದ್ದಾರೆ. ಹಾಗಿದ್ದರೆ ನಿಮ್ಮನ್ನು ಇಷ್ಟು ದಿನ ಯಾರು ಬೇಕಾದರೂ ಮುಟ್ಟಬಹುದಿತ್ತೆ? ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ನಿಮ್ಮ ಮದುವೆಯಾಗಿ ತುಂಬಾ ವರ್ಷವಾಯ್ತುಲ್ಲ, ಹಾಗಿದ್ದರೆ ಇಷ್ಟು ದಿನ? ಎಂದು ಪ್ರಶ್ನೆ ಮಾಡಿದ್ದಾರೆ.