ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಆಪರೇಷನ್ ಸಿಂದೂರ ಮೂಲಕ ಭಾರತ ಮೇಲೆ ದಾಳಿ ನಡೆಸಿದೆ. ಇದರ ನಡುವೆ ನಟಿ ಸಂಜನಾ ಗಲ್ರಾನಿ ಯುದ್ಧ ಬೇಡ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಯಾವುದೇ ಕ್ರಿಯೆಗೆ ಸಮಾನವಾದ ಅಥವಾ ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ನಾನು ಸಂಪೂರ್ಣ ದೇಶಪ್ರೇಮಿ. ಅದರ ಜೊತೆಗೆ ನಾನು ಶಾಂತಿ ಪ್ರೇಮಿಯೂ ಹೌದು. ಯಾವುದೇ ರೀತಿಯ ಸಣ್ಣ ಅಥವಾ ಯುದ್ಧ ದೇಶದ ಗೌರವಕ್ಕೆ ಒಳ್ಳೆಯದಲ್ಲ. ಯುದ್ಧವು ಭಾರತದ ಆರ್ಥಿಕತೆಗೆ ಹೊಡೆತ ನೀಡುತ್ತದೆ. ಜನ ಜೀವನ ಸ್ತಬ್ಧಗೊಳ್ಳುತ್ತದೆ. ಯುದ್ಧದಲ್ಲಿ ಪಾಲ್ಗೊಂಡ ದೇಶಗಳಿಗೆ ಆಗುವ ನಷ್ಟ ಅಗಣ್ಯ ಮತ್ತು ಅದರ ಪರಿಹಾರ ಸಾಧ್ಯವೇ ಇಲ್ಲ ಎಂದಿದ್ದಾರೆ.
ಎಲ್ಲವೂ ಶಾಂತರೀತಿಯಿಂದ ಶೀಘ್ರವೇ ಅಂತ್ಯವಾಗಲಿದೆ ಎಂಬ ನಿರೀಕ್ಷೆ ನನ್ನದು, ಜೈ ಹಿಂದ್’ ಎಂದು ನಟಿ ಸಂಜನಾ ಗಲ್ರಾನಿ ಇಂದು (ಮೇ 08) ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಆದರೆ ನಟಿಯ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.