ಕೂಲ್ ಆಗಿ ಎಲ್ಲಾ ಒತ್ತಡವನ್ನು ಹ್ಯಾಂಡಲ್ ಮಾಡೋದೆಂದರೆ ಅದು ಸಮಾನ್ಯ ಕೆಲಸವಲ್ಲ, ಅದೊಂದು ಕಲೆ. ಅದು ಎಲ್ಲರಿಗೂ ಬರುವಂಥದಲ್ಲ. ನಮ್ಮ ಸಿಂಪಲ್ ಮಿಸ್ಟೇಕ್ಸ್ ನಮ್ಮ ಮಾನಸಿಕ ಆರೋಗ್ಯವನ್ನು ನಾವು ನಿರೀಕ್ಷಿಸುವುದಕ್ಕಿಂತ ಹೆಚ್ಚು ಬಾಧಿಸುತ್ತದೆ. ಹಾಗಿದ್ದರೆ ನಿಮ್ಮ ಮಾನಸಿಕ ಆರೋಗ್ಯ ಕೆಡಿಸುವಂತಹ ಕೆಲವು ಅಭ್ಯಾಸಗಳನ್ನು ಸರಿ ಮಾಡೋದು ಹೇಗೆ?
ಅತಿಯಾದ ಆಲೋಚನೆ ಅವಶ್ಯಕವಲ್ಲ
ನಮಗೆ ತಿಳಿದಿರದ ಅಪಾಯಕಾರಿ ಅಭ್ಯಾಸಗಳಲ್ಲಿ ಇಂದು ಒಂದು. ಯೋಚನೆ ನಮ್ಮ ಆತಂಕವನ್ನು ಹೆಚ್ಚಿಸಬಹುದು, ಅದರೊಂದಿಗೆ ನಮ್ಮ ಉತ್ಪಾದಕತೆಯನ್ನು ಕಡಿಮೆಗೊಳಿಸಬಹುದು. ಹೀಗಾಗಿ ಅತಿಯಾಗಿ ಆಲೋಚಿಸುವುದನ್ನು ಬಿಟ್ಟುಬಿಡಿ.
ನಿಯಂತ್ರಿಸಲಾಗದ ವಿಷಯಗಳನ್ನು ಬಿಟ್ಟುಬಿಡಿ
ನಿಯಂತ್ರಿಸಲಾಗದ ವಿಷಯಗಳ ಬಗ್ಗೆಚಿಂತೆ ಮಾಡುವ ಅಭ್ಯಾಸವು ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಹಾಳು ಮಾಡುತ್ತದೆ. ಬದಲಿಗೆ ನಾವು ಎದುರಿಸುತ್ತಿರುವ ಸವಾಲುಗಳಿಗೆ ಸೃಜನಶೀಲ ಪರಿಹಾರಗಳನ್ನು ಹುಡುಕಲು ಆ ಶ್ರಮವನ್ನು ಖರ್ಚು ಮಾಡಬಹುದು.
ವಾಸ್ತವದಲ್ಲಿ ಬದುಕಿ:
ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಯೋಚಿಸುವಾಗ, ನಾವು ಇಂದಿನ ದಿನವನ್ನು ನಿರ್ಲಕ್ಷಿಸುತ್ತೇವೆ. ನಾವು ವಾಸ್ತವವನ್ನು ನಿರಾಕರಿಸುತ್ತಿದ್ದೇವೆ. ಹಾಗೆ ಮಾಡುವುದರಿಂದ ನಮಗೆ ನಾವೇ ಒಂದು ದೊಡ್ಡ ನೋವನ್ನು ಉಂಟುಮಾಡುತ್ತೇವೆ.
ಬೋರಿಂಗ್ ಶೆಡ್ಯೂಲ್
ಸೃಜನಶೀಲತೆ ಮತ್ತು ಕಲಿಕೆಯ ವ್ಯಾಪ್ತಿಯಿಲ್ಲದ ದೈನಂದಿನ ದಿನಚರಿಯನ್ನು ಅನುಸರಿಸುವುದು ನಮ್ಮನ್ನು ಅತೃಪ್ತರನ್ನಾಗಿಯೂ, ಚಿಂತಿತರನ್ನಾಗಿಯೂ ಮಾಡುತ್ತದೆ. ಇವು ನಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ.
ನಿಮ್ಮ ಆಲೋಚನೆಗಳನ್ನು ಗಮನಿಸಿ
ನಿಮ್ಮ ಆಲೋಚನೆಗಳನ್ನು ಗಮನಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಬಹುದು. ಇಲ್ಲವಾದರೆ ಇವು ನಿಮ್ಮ ಅತೀಂದ್ರಿಯ ಶಕ್ತಿಯನ್ನು ಕುಗ್ಗಿಸುತ್ತದೆ.