ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್ ಗೆ ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.
ಎರಡು ಗಂಟೆಗಳ ಪಾಡ್ ಕಾಸ್ಟ್ ನಲ್ಲಿ ಪ್ರಧಾನಿಯವರು ತಮ್ಮ ತಪ್ಪುಗಳು ಹಾಗೂ ಜೀವನ ಮಂತ್ರವನ್ನು ಹಂಚಿಕೊಂಡಿದ್ದರು. ನಾನು ಸೇರಿದಂತೆ ಎಲ್ಲರೂ ತಪ್ಪು ಮಾಡುವುದು ಸಹಜ ಎಂದು ಒಪ್ಪಿಕೊಂಡಿದ್ದಾರೆ. ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದಿಲ್ಲ, ನನಗಾಗಿ ನಾನೇನೂ ಮಾಡಿಕೊಳ್ಳುವುದಿಲ್ಲ, ನಾನು ಕೂಡಾ ಮನುಷ್ಯ ತಪ್ಪುಗಳಾಗುವುದು ಸಹಜ, ಆದರೆ ಕೆಟ್ಟ ಉದ್ದೇಶದೊಂದಿಗೆ ಯಾವುದೇ ತಪ್ಪು ಮಾಡುವುದಿಲ್ಲ, ಇದು ನನ್ನ ಜೀವನದ ಮಂತ್ರ. ನಾನು ಸೇರಿದಂತೆ ಎಲ್ಲರೂ ತಪ್ಪು ಮಾಡುತ್ತಾರೆ. ನಾನು ಮನುಷ್ಯ, ಯಾವುದೋ ದೇವರಲ್ಲ’ ಎಂದು ನಾನು ಮುಖ್ಯಮಂತ್ರಿಯಾದಾಗಲೇ ಹೇಳಿದ್ದಾಗಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಇದು ಸಂಪೂರ್ಣವಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವ ತಂತ್ರವಾಗಿದೆ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಸಂದರ್ಶನವನ್ನು ತನ್ನನ್ನು ದೇವರು ಕಳುಹಿಸಿದ್ದಾರೆ ಎಂದು ಮೋದಿ ಅವರು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.
2024ರ ಲೋಕಸಭೆ ಚುನಾವಣೆಗೂ ಮುನ್ನಾ ಇದೇ ಪ್ರಧಾನಿ, ಏನು ಹೇಳಿದ್ದರು ಎಂಬುದನ್ನು ಗಮನಿಸಿಬೇಕು. ಅನನ್ಯ ಸಾಮರ್ಥ್ಯ ಮತ್ತು ಸ್ಪೂರ್ತಿಯೊಂದಿಗೆ ತನ್ನನ್ನು ದೇವರು ಕಳುಹಿಸಿದ್ದಾರೆ ಎಂದು ಮೋದಿ ಹೇಳಿದ್ದರು ಎಂದು ಜೈರಾಮ್ ರಮೇಶ್ ಟ್ವೀಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ.