ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶಿಗರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಇಲ್ಲೊಂದು ವಿಡಿಯೋ ಪ್ರತ್ಯಕ್ಷ ಸಾಕ್ಷಿಯಾಗಿ ಸಿಕ್ಕಿದೆ.
ವ್ಯಕ್ತಿಯೊಬ್ಬ ರಸ್ತೆಯಲ್ಲಿ ಚಿಂದಿ ಆಯುತ್ತಿದ್ದ ಯುವಕನೋರ್ವನನ್ನು ಮಾತನಾಡಿಸುತ್ತಾರೆ. ನೀವು ಯಾರು ಎಂದು ಕೇಳಿದ್ದಕ್ಕೆ ಆ ಯುವಕ, ನಾನು ಬಾಂಗ್ಲಾದೇಶದವನು. ನಾನು ಇಲ್ಲಿ ಬೇಗೂರಿನಲ್ಲಿ ನೆಲೆಸಿದ್ದೇನೆ. ನನ್ನಂತೆ 3 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಮಂದಿ ಇಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದಾನೆ.
ನಂತರ ಆ ವ್ಯಕ್ತಿ ನಿಮ್ಮ ಬಳಿ ದಾಖಲೆಗಳಿವೆಯಾ ಎಂದು ಕೇಳುತ್ತಾರೆ. ಅದಕ್ಕೆ ಯುವಕ ಹೌದು. ನಮ್ಮ ಬಳಿ ಆಧಾರ್ ಕಾರ್ಡ್ ಮತದಾರರ ಚೀಟಿಯೂ ಇದೆ. ನಾವು ಪ್ರತಿ ಬಾರಿಯೂ ಕಾಂಗ್ರೆಸ್ ಗೆ ಮತ ನೀಡುತ್ತೇವೆ ಎಂದು ಹೇಳುತ್ತಾನೆ. ನಮಗೆ ಸಲೀಂ ಎಂಬುವರು ಆಶ್ರಯ ನೀಡಿದ್ದಾರೆ ಎಂದು ಯುವಕ ಹೇಳಿದ್ದಾನೆ. ಆರ್ಗನೈಸರ್ ವೀಕ್ಲಿ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ಇದೀಗ ಭಾರಿ ವೈರಲ್ ಆಗುತ್ತಿದೆ.
#SHOCKING: “I am from Bangladesh. There are around 3,000 of us living in Begur, Bengaluru, for the past 8 years. Our landlord’s name is Salim. We even have Aadhaar & voter ID cards, and we vote too—always for Congress”
-Confessed a man claiming to be Bangladeshi in a viral… pic.twitter.com/UDMnDfTB6Q
— Organiser Weekly (@eOrganiser) December 18, 2024