ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮದ ಕುರಿತು ಚರ್ಚೆ ಶುರುವಾದ ಬೆನ್ನಲ್ಲೇ ನಟ ಚೇತನ್ ಮಾತನಾಡಿದ್ದು, ಧರ್ಮದ ಬಗ್ಗೆ ಉದಯನಿಧಿ ಯಾವ ವ್ಯಾಪ್ತಿಯಲ್ಲಿ ಮಾತನಾಡಿದ್ದಾರೆ ಅನ್ನೋದನ್ನು ನೋಡಬೇಕು ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಚೇತನ್ ಪ್ರತಿಕ್ರಿಯಿಸಿ, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು. ನಾನು ಸನಾತನ ಧರ್ಮದ ವಿರೋಧಿಯಲ್ಲ. ಸನಾತನ ಧರ್ಮದಲ್ಲಿನ ಅಸಮಾನತೆಯ ವಿರೋಧಿ ಆಗಿದ್ದೇನೆ ಎಂದು ಹೇಳಿದರು.
ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ. ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆ ವಿಚಾರವಾಗಿ ಸಹಮತವಿದೆ. ಅದು ಸಮಾಜದ ಸಿವಿಲ್ ಕೋಡ್ ಆಗಿರಬೇಕು. ಕಮ್ಯೂನಿಸ್ಟ್‌ಗಳು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ ಎಂದರು.
ಕಾಂಗ್ರೆಸ್‌ನವರು ಐದು ಗ್ಯಾರಂಟಿ ತಂದು ತೇಪೆ ಹೆಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ದೇವರಾಜ ಅರಸು ಆಡಳಿತಕ್ಕೆ ಹೋಲಿಸಬೇಡಿ . ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಪಕ್ಷದವರು ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ರೈತರ ಭೂಮಿಯನ್ನು ಗಣಿಗಾರಿಕೆಗೆ ಕೊಟ್ಟಿದ್ದಾರೆ ಎಂದು ಚೇತನ್ ಕಿಡಿಕಾರಿದ್ದರು. ಅಂದು ಗಣಿಗಾರಿಕೆ ವಿರುದ್ಧವೇ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು ಎಂದು ಟಾಂಗ್ ಕೊಟ್ಟರು.