ನಾನು ನನಗಾಗಿ ಹುಟ್ಟಿಲ್ಲ…ನಿಮ್ಮಗಾಗಿ, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜೀವಿಸುತ್ತಿದ್ದೇನೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾನು ನನಗಾಗಿ ಹುಟ್ಟಿಲ್ಲ, ಜೀವಿಸುತ್ತಿಲ್ಲ. ನಿಮ್ಮ ಸೇವೆಗೆ ದೇವರು ನನ್ನ ಕಳುಹಿಸಿದ್ದಾನೆ ಎಂದು ಜನತೆಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೆಹಲಿಯಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, 50-60 ವರ್ಷದ ಹಿಂದೆ ಮನೆ ಬಿಟ್ಟಾಗ ನಾನು ಕೆಂಪು ಕೋಟೆಯಲ್ಲಿ ಧ್ವಜ ಹಾರಿಸುವ ನಿರೀಕ್ಷೆ ಇರಲಿಲ್ಲ. 50-60 ವರ್ಷ ಬಿಡುವಾಗ ಎಲ್ಲವನ್ನು ಬಿಟ್ಟಿದ್ದೆ. ಈಗ 140 ಕೋಟಿ ಜನರು ನನ್ನ ಕುಟುಂಬವಾಗಿದೆ. ನಾನು ನನಗಾಗಿ ಹುಟ್ಟಿಲ್ಲ, ಜೀವಿಸುತ್ತಿಲ್ಲ. ನಿಮ್ಮಗಾಗಿ, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜೀವಿಸುತ್ತಿದ್ದೇನೆ ಎಂದು ತಿಳಿಸಿದರು.

ನನಗೆ ಯಾರೂ ಉತ್ತರಾಧಿಕಾರಿ ಇಲ್ಲ. 140 ಕೋಟಿ ಜನರು ನನ್ನ ಉತ್ತರಾಧಿಕಾರಿಗಳು. ಹೀಗಾಗಿ ನಾನು ನಿಮಗಾಗಿ ಹಗಲು ರಾತ್ರಿ ಶ್ರಮಪಡುತ್ತಿದ್ದೇನೆ. ನನ್ನ ಕಣ ಕಣವು ನಿಮಗಾಗಿ, ದೇಶಕ್ಕಾಗಿ. ನಿಮ್ಮ ಕನಸುಗಳೇ ನನ್ನ ಸಂಕಲ್ಪ. ನಿಮ್ಮ ಕನಸು‌ ನನಸಾಗಲಿ ಎಂದೇ ಈ ಜೀವನವನ್ನು ಬಲಿದಾನ ಮಾಡುತ್ತಿದ್ದೇನೆ. 2047 ವರೆಗೂ 24×7 ಇದು ಮೋದಿಯ ಗ್ಯಾರಂಟಿ. ದೇಶವನ್ನು ಬಲಿಷ್ಠ ಮಾಡಲು ಬಲಿಷ್ಠ ಸರ್ಕಾರ ಬೇಕು. ನನಗೂ ಬಲಿಷ್ಠ ಜೊತೆಗಾರರು ಬೇಕು. ಹೀಗಾಗೀ ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

2024 ರ ಚುನಾವಣೆ ಭಾರತವನ್ನು ಮೂರನೇ ಆರ್ಥಿಕತೆ ಮಾಡುವುದು. ಭಾರತದಲ್ಲಿ ಬಡವರು, ಮಧ್ಯಮವರ್ಗ ಜನರ ಸುಲಭಗೊಳಿಸುವುದು, ಅವರ ಜೀವನದಲ್ಲಿ ಖುಷಿ ತರುವುದು. ಈ ಚುನಾವಣೆ ಬಡವ ಮತ್ತು ಮಧ್ಯಮ ವರ್ಗದ ಆಸ್ತಿಯನ್ನು ಕಿತ್ತುಕೊಳ್ಳುವರಿಂದ ರಕ್ಷಿಸಿಕೊಳ್ಳಲು. ಈ ಚುನಾವಣೆ ಯುವ ಸಮುದಾಯಕ್ಕೆ ಹೊಸ ಅವಕಾಶಗಳನ್ನು ಸೃಷ್ಠಿಸಲು. ಈ ಚುನಾವಣೆ ಕುಟುಂಬ ರಾಜಕೀಯ ಅಂತ್ಯಗೊಳಿಸಲು ಎಂದರು.

ಬಲಿಷ್ಠವಾದ ದೇಶ ಕಟ್ಟಲು ಈ ಚುನಾವಣೆ ಮುಖ್ಯವಾಗಿದೆ. ಭಾರತವನ್ನು ಬಲಹೀನ ಮಾಡುವವರ ವಿರುದ್ಧ ಈ ಚುನಾವಣೆ. ದೇಶಕ್ಕೆ ಒಂದು ಬಲಿಷ್ಠ ಸರ್ಕಾರದ ಅವಶ್ಯಕತೆ ಇದೆ. ದೆಹಲಿ ವಿಶ್ವಕ್ಕೆ ಒಂದು ಆಕರ್ಷಣೀಯ ಕೇಂದ್ರವಾಗಬೇಕು. ಇದಕ್ಕಾಗಿ ಮೋದಿ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!