ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಪ್ರಧಾನಿ ನರೇಂದ್ರ ಮೋದಿಯಂತೆ ಅಲ್ಲ. ಹೇಳಿದ್ದನ್ನು ಮಾಡುತ್ತೇನೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ತೆಲಂಗಾಣ ದ ನಾಗರ್‌ಕರ್ನೂಲ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೊದಲು ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯಲಿದ್ದಾರೆ. ಬಳಿಕ ಜನರಿಂದ ಲೂಟಿ ಮಾಡಿದ ಹಣದ ಲೆಕ್ಕವನ್ನು ನಾವು ಕೇಳುತ್ತೇವೆ. ಮುಖ್ಯಮಂತ್ರಿ ಲೂಟಿ ಮಾಡಿದ ಹಣವನ್ನು ನಿಮಗೆ ಮರಳಿ ಕೊಡಬೇಕು ಎಂದು ನಾನು ನಿಶ್ಚಿಯಿಸಿದ್ದೇನೆ. ನಾನು ನರೇಂದ್ರ ಮೋದಿಯಂತೆ ಅಲ್ಲ. ಹೇಳಿದ್ದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಎಐಎಂಐಎಂ ವಿರುದ್ಧವೂ ಟೀಕೆ ಮಾಡಿದ ಅವರು, ‘ಮಹಾರಾಷ್ಟ್ರ, ರಾಜಸ್ಥಾನ, ಅಸ್ಸಾಂ, ಉತ್ತರ ಪ್ರದೇಶ ಹೀಗೆ ಕಾಂಗ್ರೆಸ್ ಎಲ್ಲೆಲ್ಲಾ ಚುನಾವಣೆ ಸ್ಪರ್ಧೆ ಮಾಡುತ್ತದೆಯೋ. ಅಲ್ಲೆಲ್ಲಾ ಎಐಎಐಎಂನ ಅಭ್ಯರ್ಥಿಗಳು ಮ್ಯಾಜಿಕ್‌ನಂತೆ ಪ್ರತ್ಯಕ್ಷವಾಗುತ್ತಾರೆ. ಎಲ್ಲಾ ಎಐಎಂಐಎಂನ ಅಭ್ಯರ್ಥಿಗಳು ಬಿಜೆಪಿಯ ಬೆಂಬಲಿಗರು. ಎಐಎಂಐಎಂನವರು ಹಣ ಪಡೆದುಕೊಂಡು ದಿನದ 24 ಗಂಟೆಯೂ ಬಿಜೆಪಿಯವರಿಗೆ ಸಹಾಯ ಮಾಡುತ್ತಾರೆ’ ಎಂದು ಆರೋಪಿಸಿದರು.