ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಒಕ್ಕಲಿಗ ಸಮುದಾಯದ ಎರಡು ಪ್ರಮುಖ ಕುಟುಂಬಗಳ ನಡುವಿನ ರಾಜಕೀಯ ಸಮರ ಕುತೂಹಲ ಮೂಡಿಸಿದೆ. ಹೆಚ್ ಡಿ ದೇವೇಗೌಡ ಮತ್ತು ಡಿಕೆ ಶಿವಕುಮಾರ್ ಕುಟುಂಬಗಳು 2018ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದ ನಂತರ ಎಷ್ಟು ಆತ್ಮೀಯವಾಗಿದ್ದವು ಅಂತ ರಾಜ್ಯದ ಜನತೆ ನೋಡಿದ್ದಾರೆ.
ಆದರೆ, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಕುಮಾರ್ ರಾಮನಗರಕ್ಕೆ ಹೇಗೆ ಕೊಡುಗೆ ನೀಡುತ್ತಾರೆ ಎಂಬುದನ್ನು ಈ ಹಿಂದೆ ಕುಮಾರಸ್ವಾಮಿ ಬಹಿರಂಗಪಡಿಸಿದ್ದರು. ಅವರು ನನಗೆ ಸವಾಲು ಹಾಕಿದ್ದಾರೆ ಮತ್ತು ನಾನು ಅವರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ ಎಂದು ಶಿವಕುಮಾರ್ ಇಂದು ಬೆಂಗಳೂರಿನಲ್ಲಿ ಹೆಚ್ ಡಿಕೆ ಅವರ ಸವಾಲನ್ನು ಸ್ವೀಕರಿಸಿದ್ದಾರೆ.
ವೇದಿಕೆ ಯಾವುದೇ ಆಗಿರಲಿ ಟಿವಿ ಮಾಧ್ಯಮಗಳು ತಮ್ಮ ಚ್ಯಾನೆಲ್ ನಲ್ಲಿ ಚರ್ಚೆ ಏರ್ಪಡಿಸಿದರೂ ನಾನು ಸಿದ್ಧ ಮತ್ತು ಯಾವುದೇ ಜಾಗದಲ್ಲಿ ಬಹಿರಂಗ ಚರ್ಚೆಗೂ ನಾನು ಸಿದ್ಧ ಎಂದು ಹೇಳಿದ್ದಾರೆ.