ಹೊಸದಿಗಂತ ಮಂಡ್ಯ :
ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 8 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಅರುಣ್ ಕುಮಾರ್. ಟಿ.ವಿ, ಇಂದುಕುಮಾರ್. ಎಂ, ಕೃಷ್ಣ. ಜಿ, ಚಿಕ್ಕಯ್ಯ, ಹೆಚ್. ನಾರಾಯಣ, ಎಲ್.ಡಿ. ನಂದೀಶ, ಶಂಭುಲಿಂಗೇಗೌಡ, ಸತೀಶ್ ಕುಮಾರ್ ಅವರ ನಾಮಪತ್ರ ತಿರಸ್ಕೃತವಾಗಿರುತ್ತವೆ.
ಕ್ರಮಬದ್ದವಾಗಿರುವ ಉಮೇದುವಾರರ ಪಟ್ಟಿ :
ಹೆಚ್. ಡಿ. ಕುಮಾರಸ್ವಾಮಿ – ಜನತಾ ದಳ (ಜಾತ್ಯತೀತ), ವೆಂಕಟರಮಣೇಗೌಡ – ಕಾಂಗ್ರೆಸ್, ಶಿವಶಂಕರ್ ಎಸ್ – ಬಹುಜನ ಸಮಾಜ ಪಾರ್ಟಿ, ಚಂದ್ರಶೇಖರ ಕೆ. ಆರ್ – ಕರ್ನಾಟಕ ರಾಷ್ಟ್ರ ಸಮಿತಿ, ಬೂದಯ್ಯ – ಕರುನಾಡು ಪಾರ್ಟಿ, ಹೆಚ್.ಡಿ. ರೇವಣ್ಣ – ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ, ಲೋಕೇಶ ಎಸ್ – ಉತ್ತಮ ಪ್ರಜಾಕೀಯ ಪಕ್ಷ, ಎಸ್. ಅರವಿಂದ್ – ಪಕ್ಷೇತರ, ಚನ್ನಮಾಯಿಗೌಡ – ಪಕ್ಷೇತರ, ಚಿಕ್ಕನಂಜಾಚಾರಿ – ಪಕ್ಷೇತರ, ಚಂದನ್‌ಗೌಡ. ಕೆ – ಪಕ್ಷೇತರ, ಎನ್. ಬಸವರಾಜು – ಪಕ್ಷೇತರ, ಬೀರೇಶ್. ಸಿ. ಟಿ – ಪಕ್ಷೇತರ, ಯೋಗೇಶ್ – ಪಕ್ಷೇತರ, ರಾಮಯ್ಯ. ಡಿ – ಪಕ್ಷೇತರ, ರಂಜಿತ. ಎನ್ – ಪಕ್ಷೇತರ, ಲೋಲ – ಪಕ್ಷೇತರ, ಶಿವನಂಜಪ್ಪ – ಪಕ್ಷೇತರ, ಕೆ. ಶಿವಾನಂದ – ಪಕ್ಷೇತರ ಒಟ್ಟು 19 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದವಾಗಿರುತ್ತದೆ.