ನಾನು ಇಂದು ಏನೇ ಆಗಿದ್ದರು ಅದಕ್ಕೆ ಕಾರಣ ಯಡಿಯೂರಪ್ಪ: ಭಾವುಕರಾದ ಬೊಮ್ಮಾಯಿ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮ್ಮ ತಂದೆಯವರು ಯಾವಾಗಲು ಮನೆಯಲ್ಲಿ ನಮಗೆ ಎಲ್ಲರಿಗೂ ಸಮನಾಗಿ ಬಡಸಿ, ಅವರು ಊಟ ಮಾಡ್ತಾ ಇದ್ರು ಎಂದು ತಂದೆಯನ್ನ ನೆನೆದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಭಾವುಕರಾಗಿದ್ದಾರೆ.

ಇಂದು(ಮಂಗಳವಾರ) ಬೆಂಗಳೂರಿನ ನಗರದ ಗಾಂಧಿಭವನದಲ್ಲಿ ನಡೆದ ದಿ.ಎಸ್.ಆರ್. ಬೊಮ್ಮಾಯಿ‌ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಬೊಮ್ಮಾಯಿ‌ ಅವರು, ನಾನು ಇಂದು ಏನೇ ಆಗಿದ್ದರು ಅದಕ್ಕೆ ಕಾರಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಾಹೇಬರು. ಮನೆಯಲ್ಲಿ ಇದ್ದ ನನ್ನನ್ನು ಕೈ ಹಿಡಿದು ಕರೆದುಕೊಂಡು ಬಂದು ಸ್ಥಾನಮಾನ ನೀಡಿದ್ದು ಯಡಿಯೂರಪ್ಪ ಸಾಹೇಬರು ಎಂದು ಕಣ್ಣೀರು ಸುರಿಸುತ್ತಾ ಬೊಮ್ಮಾಯಿ‌ ಭಾವುಕರಾಗಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು, ಎಸ್.ಆರ್. ಬೊಮ್ಮಾಯಿ ಮಾಡಿದ ಹೋರಾಟ ಅವೀಸ್ಮರಣೀಯವಾದದ್ದು. ಹಿಂದೆ ಇದ್ದ ರಾಜ್ಯಪಾಲರು ರಾಜಭವನದಲ್ಲಿ ಎಲ್ಲ ಆಟಗಳನ್ನು ಆಡ್ತಿದ್ರು. ಬೂಟಾ ಸಿಂಗ್ ರವರು ಶಾಸಕರನ್ನು ಕರೆದುಕೊಂಡು ಹೋಗಿ ರಾಜಭವನದಲ್ಲಿ ಮಲಗಿಸಿಕೊಂಡಿದ್ರು. ಅವಾಗ ನಾನು ಪ್ರತ್ಯಕ್ಷದರ್ಶಿಯಾಗಿ ಎಲ್ಲವನ್ನು ಕಂಡಿದ್ದೇನೆ. ಅಂದು ರಾಜ್ಯಪಾಲರ ಆಡುವ ಆಟಕ್ಕೆ ಇತಿ ಶ್ರೀ ಆಡಿದ್ದು ಎಸ್.ಆರ್. ಬೊಮ್ಮಾಯಿ ಅವರು. ನಾನು ರಾಜ್ಯಪಾಲರಾಗಿದ್ದಾಗ ಈ ರೀತಿ ಆಗಿಲ್ಲ. ಆದರೆ ಕೆಲವರ ರಾಜ್ಯಪಾಲರ ನಡೆಯಿಂದ ನಮ್ಮ ರಾಜ್ಯಕ್ಕೆ ದೊಡ್ಡ ಅಪಮಾನ ಆಗಿರೋದನ್ನು ನಾವು ಕೇಳಿದ್ದೇವೆ. ಎಸ್.ಆರ್. ಬೊಮ್ಮಾಯಿ ಅವರು ಸೌಜನ್ಯ ಶೀಲರು ಅಂತ ಹೇಳಿದ್ದಾರೆ.

https://twitter.com/BSBommai?ref_src=twsrc%5Egoogle%7Ctwcamp%5Eserp%7Ctwgr%5Eauthor

ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನಾನು ಅದೇ ಸ್ವಭಾವವನ್ನು ಅವರಲ್ಲಿ ನೋಡಿದ್ದೇನೆ. ಇದು ಅವರಿಗೆ ವಂಶ ಪಾರಂಪರ್ಯವಾಗಿ ಬಂದಿರುವಂತದ್ದು. ಕರ್ನಾಟಕಕ್ಕೆ ಇದು ವಿಶೇಷ ಅನ್ನೋದನ್ನು ನಾವೆಲ್ಲರೂ ಭಾವಿಸಿಕೊಳ್ಳಬೇಕು. ಇವಾಗ ಪ್ರಜಾಪ್ರಭುತ್ವ ಯಾವ ಕಡೆ ಹೋಗ್ತಿದೆ ಎಂದು ಎಲ್ಲರ ಯೋಚಿಸಬೇಕು. ಹಣದ ಪ್ರಭಾವ ಈ ಚುನಾವಣೆಗಳಲ್ಲಿ ಎಷ್ಟರ ಮಟ್ಟಿಗೆ ಹೋಗ್ತಿದೆ ಎಂಬುದನ್ನು ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ನೋಡಬಹುದು. ಹಣ ಹಂಚಿಕೆಯ ಚುನಾವಣೆಯಿಂದ ಪ್ರಜಾಪ್ರಭುತ್ವಕ್ಕೆ ಎಷ್ಟು ಒಳ್ಳೆಯದನ್ನು ಮಾಡಬಲ್ಲದು ಎಂಬುದನ್ನು ಮುಂದೆ ನೋಡಬೇಕಿದೆ. ಹಣದ ಹೊಳೆ ಹರಿಸೋದು ಅತ್ಯಂತ ದೋಷಣೆಯ ವಿಷಯವಾಗಿದೆ. ಇದರ ಬಗ್ಗೆ ನಮ್ಮ ನಾಡಿತ‌ ಹಿತ ಚಿಂತಕರು ಗಂಭೀರವಾಗಿ ಆಲೋಚಿಸಬೇಕಿದೆ. ಹಣದ ಚುನಾವಣೆ ಬಗ್ಗೆ ಎಸ್. ಎಂ. ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!