ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪ್ರಯಾಗರಾಜ್ ನ ಮಹಾ ಕುಂಭಮೇಳದತ್ತ ಭಕ್ತ ಸಾಗರ ಹರಿದು ಬರುತ್ತಿದ್ದಾರೆ. ಗಣ್ಯಾತೀಗಣ್ಯರು, ಸಾಧು-ಸಂತರು ಸೇರಿದಂತೆ ಲಕ್ಷಾಂತರ ಭಕ್ತರು ಪುಣ್ಯಸ್ನಾನದಲ್ಲಿ ಭಾಗಿಯಾಗುತ್ತಿದ್ದಾರೆ.
ಇತ್ತ ಪ್ರಯಾಗರಾಜ್ ನಲ್ಲಿನ ಮಹಾ ಕುಂಭಕ್ಕೆ ಭೇಟಿ ನೀಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ಪ್ರತಿದಿನ ನನ್ನ ಮನೆಯಲ್ಲಿ ಸ್ನಾನ ಮಾಡುತ್ತೇನೆ. ಮನೆಯಲ್ಲೇ ಮಾಡುವ ಅಭ್ಯಾಸ ಇದೆ, ಬೇರೆಡೆ ಮಾಡಲ್ಲ ಎಂದು ಹೇಳಿದ್ದಾರೆ.
ನಾನು ಪ್ರತಿದಿನ ನನ್ನ ಮನೆಯಲ್ಲಿ ಸ್ನಾನ ಮಾಡುತ್ತೇನೆ. ನನ್ನ ಮನೆ ಮಸೀದಿಯಲ್ಲಿಲ್ಲ, ದೇವಸ್ಥಾನದಲ್ಲಿಲ್ಲ, ಗುರುದ್ವಾರದಲ್ಲಿಲ್ಲ. ನನ್ನ ದೇವರು ನನ್ನೊಳಗೆ ಇದ್ದಾನೆ ಎಂದು ಹೇಳಿದರು.
ಇನ್ನು ದೆಹಲಿ ಚುನಾವಣೆಯಲ್ಲಿ ಏನಾಗುತ್ತದೆ ಎಂದು ಹೇಳಲು ನಾನು ಜ್ಯೋತಿಷಿಯಾಗಬೇಕಾಗುತ್ತದೆ. ಯಾರು ಬರುತ್ತಾರೆ ಮತ್ತು ಯಾರು ಹೋಗುತ್ತಾರೆ ಎಂದು ನನಗೆ ಹೇಗೆ ತಿಳಿಯುತ್ತದೆ? ನನಗೆ ಈ ಸ್ಥಳದ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿದರು.