ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ 11ರ ವಿಜೇತ ಹನುಮಂತು ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ನೆನಪು ಹಂಚಿಕೊಂಡಿದ್ದಾರೆ.
ತಮ್ಮ ಬದುಕಿಗೆ ದಾರಿ ತೋರಿದ ವ್ಯಕ್ತಿಯಾಗಿ ಸಿಜೆ ರಾಯ್ ಅವರನ್ನು ಸ್ಮರಿಸಿದ ಹನುಮಂತು, “ಹಣ ನೀಡಿ ನನ್ನ ಜೀವನಕ್ಕೆ ಬೆಳಕು ತಂದವರು ನೀವು. ನಿಮ್ಮ ಋಣವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ, ಸರಿಗಮಪ ಸೀಸನ್ 12ರಲ್ಲಿ ತಾನು ರನ್ನರ್ ಅಪ್ ಆಗಿದ್ದ ಸಂದರ್ಭದಲ್ಲಿ ಸಿಜೆ ರಾಯ್ ನೆರವಾಗಿದ್ದನ್ನು ಹನುಮಂತು ನೆನಪಿಸಿಕೊಂಡಿದ್ದಾರೆ. ಆ ಬಳಿಕ ಬಿಗ್‌ಬಾಸ್ ಸೀಸನ್ 11ರಲ್ಲಿ ಜಯ ಸಾಧಿಸಿದಾಗಲೂ ಸಿಜೆ ರಾಯ್ ಪ್ರೀತಿಯಿಂದ ಹಣ ನೀಡಿ ಸಂಭ್ರಮಿಸಿದ್ದ ಕ್ಷಣಗಳನ್ನು ಅವರು ಸ್ಮರಿಸಿದ್ದಾರೆ. “ನಿಮ್ಮ ಅಗಲಿಕೆ ಸುದ್ದಿ ಮನಸ್ಸನ್ನು ತುಂಬಾ ಭಾರ ಮಾಡಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹನುಮಂತು ದುಃಖ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಕಚೇರಿಯಲ್ಲಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.



