ಮೋದಿಯಿಂದಾಗಿ ನನಗೆ ಭಾರತೀಯ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ: ಹಳಹಳಿಸಿದ ಮಸೂದ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾನು ಭಾರತೀಯ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗದ್ದಕ್ಕೆ ನರೇಂದ್ರ ಮೋದಿ ಕಾರಣ ಎಂದು ಪಾಕಿಸ್ತಾನದ ಇಸ್ಲಾಮಿಕ್ ವಿದ್ವಾಂಸ ಮುಫ್ತಿ ತಾರಿಕ್ ಮಸೂದ್ ಹೇಳಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಹರಿದಾಡುತ್ತಿದೆ. ಇಷ್ಟಕ್ಕೂ ಏನಂದರು ಮಸೂದ್? ಇಲ್ಲಿದೆ ಓದಿ…
ಇದು ತುಂಬಾ ಹಳೆಯ ಘಟನೆ. ಪ್ರಧಾನಿ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದರು. ಆ ಮೂಲಕ ನನಗೆ ಭಾರತಕ್ಕೆ ಹೋಗಲು ವೀಸಾ ಸಿಗಲಿಲ್ಲ. ಮುಂದಿನ ಬಾರಿ ಅವರು ಅಧಿಕಾರಕ್ಕೆ ಬರಲಾರರು ಎಂದು ನಾನು ಐದು ವರ್ಷಗಳ ಕಾಲ ಕಾದು ಕುಳಿತೆ, ಆದರೆ ನಂತರ 2019ರಲ್ಲಿ ಕೂಡ ಮೋದಿ ಮತ್ತೆ ಗೆದ್ದರು. ಹಿಗಾಗಿ ನನ್ನ ಕನಸುಗಳು ಛಿದ್ರವಾದವು ಎಂದು ಅವರು ಹೇಳಿದ್ದಾರೆ.
ಮೋದಿ ಮತ್ತೆ ಮತ್ತೆ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದರು. ಹೀಗಾಗಿ ಭಾರತೀಯ ಹುಡುಗಿಯನ್ನು ನನಗೆ ಮದುವೆ ಆಗಲು ಸಾಧ್ಯವಾಗಲಿಲ್ಲ ಅವರು ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಈಗಾಗಲೇ ಎರಡು ಭಾರಿ ಗೆಲ್ಲುವ ಮೂಲಕ ನಾನು 10 ವರ್ಷ ಕಾಯ್ದಿದ್ದೇನೆ. ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನಿಲ್ಲಿ ಕಾಯುತ್ತಾ ಕೂರಬೇಕಾಗುತ್ತದೆ ಎಂದಿದ್ದಾರೆ ಮಸೂದ್!
ಯಾರು ಈ ಮುಫ್ತಿ ತಾರಿಕ್ ಮಸೂದ್?
ಮುಫ್ತಿ ತಾರಿಕ್ ಮಸೂದ್ ಪಾಕಿಸ್ತಾನದ ಇಸ್ಲಾಮಿಕ್ ವಿದ್ವಾಂಸ. ಪುರುಷರು ಬಹು ಪತ್ನಿತ್ವವನ್ನು ಹೊಂದಬೇಕು ಎಂಬ ಕಲ್ಪನೆಯನುಯನ್ನು ಇವರು ಬೆಂಬಲಿಸುತ್ತಾರೆ. ಈಗಾಗಲೇ ಈ ಮಸೂದ್, ನಾಲ್ಕು ಮದುವೆ ಮಾಡಿಕೊಂಡಿದ್ದು, ೧೬ ಮಕ್ಕಳನ್ನು ಹೊಂದಿದ್ದಾರೆ. ಜೊತೆಗೆ ತನ್ನ ಪಾಕಿಸ್ತಾನದ ಅನುಯಾಯಿಗಳಿಗೂ ಹೆಚ್ಚು ಹೆಚ್ಚು ಮದುವೆ, ಹೆಚ್ಚು ಮಕ್ಕಳನ್ನು ಹೊಂದುವ ಸಲಹೆ ನೀಡುವುದನ್ನು ಕಾಣಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!