ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಮಾಡಿದ ನಂತರ ಇದೀಗ ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೌನ ಮುರಿದಿದ್ದಾರೆ.
ನನ್ನ ಉಚ್ಚಾಟನೆಗೆ ಅಪ್ಪ – ಮಗ (ಯಡಿಯೂರಪ್ಪ-ವಿಜಯೇಂದ್ರ) ಕಾರಣ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಯಡಿಯೂರಪ್ಪ ಆಗಲೀ, ನಾನಾಗಲೀ ಅವರ ಉಚ್ಚಾಟನೆಯ ಹಿಂದೆ ಇಲ್ಲ. ಹೈಕಮಾಂಡ್‌ನವರ ತೀರ್ಮಾನ ಇದು. ಹಾಗೆಂದ ಮಾತ್ರಕ್ಕೆ ಯತ್ನಾಳ್ ಅವರ ಉಚ್ಚಾಟನೆಯನ್ನು ನಾನು ಸಂಭ್ರಮಿಸೋದಿಲ್ಲ ಎಂದರು.
ಯತ್ನಾಳ್ ವಿರುದ್ಧ ತೀರ್ಮಾನ ಮಾಡಿರೋದು ವಿಜಯೇಂದ್ರ ಆಗಲಿ, ಯಡಿಯೂರಪ್ಪ ಆಗಲಿ ಅಲ್ಲ. ಕ್ರಮದ ಬಗ್ಗೆ ಕೇಂದ್ರದ ವರಿಷ್ಠರು ನಿರ್ಧಾರ ಮಾಡಿರೋದು. ಯತ್ನಾಳ್ ಉಚ್ಚಾಟನೆಯಿಂದ ನಾನು ಸಂಭ್ರಮಿಸುವ ವ್ಯಕ್ತಿ ಅಲ್ಲ. ಅಂತಹ ಮನಸ್ಥಿತಿ ಇದ್ದರೆ ನಾನೊಬ್ಬ ರಾಜ್ಯದ ಅಧ್ಯಕ್ಷನಾಗೋಕೆ ನಾಲಾಯಕ್ ಎಂದು ಹೇಳಿದರು.