ಹೊಸದಿಗಂತ ವರದಿ, ಹಾಸನ:
ಕಲಾ ಕಾಲೇಜಿನ ಕಾಮರ್ಸ್ ವಿಭಾಗದ ಕೆಲ ವಿದ್ಯಾರ್ಥಿಗಳು ತರಗತಿಯಲ್ಲಿ ಕಿರಿಕ್ ಮಾಡುತ್ತಿದ್ದರು ಎಂಬ ಎಂಬ ಕಾರಣಕ್ಕೆ ಪ್ರಾಂಶುಪಾಲರು ತಮ್ಮ ಕಚೇರಿಯಲ್ಲಿ ಇಂದು ಪೋಷಕರನ್ನು ಕರೆಸಿ ಸಭೆ ನಡೆಸುವ ಮೂಲಕ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಂಶುಪಾಲರಾದ ಇರ್ಷಾದ್ ಅವರು, ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಗಳು ತರಗತಿ ನಡೆಯುವಾಗ ಇತರ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದು, ಪಾಠ ಮಾಡುತ್ತಿದ್ದ ಬೋಧಕರಿಗೆ ಕಿರಿಕ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇಂದು ಪೋಷಕರನ್ನು ಕರೆದು ಸಭೆ ನಡೆಸಲಾಗುತ್ತಿದೆ ಎಂದರು.
ಈ ಹಿಂದೆ ಕೂಡ ಹಲವು ಬಾರಿ ಮಕ್ಕಳಿಗೆ ವಾರ್ನಿಂಗ್ ಕೊಡಲಾಗಿದೆ ಆದರೆ ತಿದ್ದಿಕೊಳ್ಳದೆ ಇರುವುದು ತಪ್ಪು, ಪಾಠ ಮಾಡುವಾಗ ಶಿಕ್ಷಕರಿಗೆ ಕಿಚಾಯಿಸುವುದು, ತರಗತಿಗೆ ಬಾರದೆ ನಡೆಯುತ್ತಿದ್ದರೂ ಸುಖಾ ಸುಮ್ಮನೆ ಓಡಾಡುವುದು ಹೀಗೆ ಮಕ್ಕಳ ಬಗ್ಗೆ ಹಲವು ಆರೋಪಗಳಿವೆ. ಆದುದರಿಂದ ಪೋಷಕರು ಹಾಗೂ ಬೋಧಕ ಸಿಬ್ಬಂದಿ ಇಬ್ಬರನ್ನು ಕರೆಸಿ ಕಡೆಯದಾಗಿ ಅವರ ಸಮಸ್ಯೆಗಳನ್ನು ಚರ್ಚಿಸಲಾಗುತ್ತಿದೆ ಎಂದರು.
ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿರುವ ಕಾಲೇಜು ಶಿಕ್ಷಣ ಇಲಾಖೆಯ ದ್ಯೆಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ವಿಧ್ಯಾರ್ಥಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು, ಕೆಲ ವಿಧ್ಯಾರ್ಥಿಗಳ ನಡವಳಿಕೆಯಿಂದ ಇತರ ವಿದ್ಯಾರ್ಥಿಗಳಿಗೂ ತೊಂದರೆ ಆಗಬಾರದು ಹಾಗೂ ಸಂಸ್ಥೆಗೂ ಕೆಟ್ಟ ಹೆಸರು ಬರಬಾರದು ಎಂಬ ಉದ್ದೇಶದಿಂದ ಮುಂಜಾಗ್ರತಾ ಕ್ರಮ ವಹಿಸಲಾಗಿದೆ