ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬಿಗ್ ಬಾಸ್ ಕನ್ನಡ 11’ರ ವಿನ್ನರ್ ಹನುಮಂತ ಗೆಲುವಿನ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ಗೆದ್ದಿಲ್ಲ, ಕರ್ನಾಟಕದ ಜನತೆ ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಮಾತನಾಡಿದ್ದಾರೆ.
ಮನೆಯಲ್ಲಿ ಮಲ್ಕೊಂಡಿದ್ದೆ, ಈಗ ಎದ್ದಿದ್ದೇನೆ. ನಾನು ಎಲ್ಲೂ ಹೋಗಿಲ್ಲ. ನಾನು ಬಿಗ್ ಬಾಸ್ ಗೆದ್ದಿಲ್ಲ, ಕರ್ನಾಟಕದ ಜನತೆ ವೋಟ್ ಮಾಡಿ ಜನ ಗೆಲ್ಲಿಸಿದ್ದಾರೆ. ವೋಟ್ ಮಾಡಿ ಗೆಲ್ಲಿಸಿದ್ದಕ್ಕೆ ಕರ್ನಾಟಕದ ಜನೆಗೆ ಧನ್ಯವಾದಗಳು ಎಂದು ಮಾತನಾಡಿದ್ದಾರೆ.
ಹನುಮಂತ ಅವರು ಶೋನಲ್ಲಿ 50 ಲಕ್ಷ ರೂ. ಗೆದ್ದಿದ್ದಾರೆ. ಈ ಮೊದಲು ಬೇರೆ ಬೇರೆ ಬಿಗ್ ಬಾಸ್ ಶೋ ವಿಜೇತರಿಗೆ ನಗದು ಬಹುಮಾನ ಮೌಲ್ಯ 50 ಲಕ್ಷ ರೂ., 1 ಕೋಟಿ ರೂ. ಇರುತ್ತಿತ್ತು. ಆದರೆ ಈಗ ಎಲ್ಲಾ ಬಿಗ್ ಬಾಸ್ ಶೋ ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.
ಹನುಮಂತ ಅವರಿಗೆ ತೆರಿಗೆ, ಸೆಸ್ ಎಲ್ಲಾ ಕಡಿತಗೊಂಡು 34,40,000 ರೂ. ಸಿಗಬಹುದು. ಬಹುಮಾನದಲ್ಲಿ 15,60,000 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ.