Saturday, April 1, 2023

Latest Posts

ಈ ಯಾತ್ರೆ ದೇಶದ ಜನರಿಗಾಗಿ ಮಾಡಿದ್ದೇನೆ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಮಾರೋಪ ಸಮಾರಂಭವು ಇಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir)ಶ್ರೀನಗರದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನಾನು ಈ ಯಾತ್ರೆಯನ್ನು ನನಗಾಗಲಿ ಅಥವಾ ಕಾಂಗ್ರೆಸ್‌ಗಾಗಿ ಮಾಡಿಲ್ಲ, ದೇಶದ ಜನರಿಗಾಗಿ ಮಾಡಿದ್ದೇನೆ. ಈ ದೇಶದ ಅಡಿಪಾಯವನ್ನು ನಾಶಮಾಡಲು ಬಯಸುವ ಸಿದ್ಧಾಂತದ ವಿರುದ್ಧ ನಿಲ್ಲುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆ ಕೈಗೊಳ್ಳುವಂತೆ ಬಿಜೆಪಿ ವರಿಷ್ಠರಿಗೆ ಸವಾಲು ಹಾಕಿದ ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬಿಜೆಪಿ ನಾಯಕರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಖಾತರಿ ನೀಡಬಲ್ಲೆ. ಅವರು ಅದನ್ನು ಮಾಡುವುದಿಲ್ಲ, ಅವರಿಗೆ ಅವಕಾಶ ನೀಡುವುದಿಲ್ಲ ಎಂಬ ಕಾರಣದಿಂದಲ್ಲ ಆದರೆ ಅವರು ಭಯಪಡುತ್ತಾರೆ ಎಂದು ಅವರು ಹೇಳಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!