ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ: ನಟ ಅಲ್ಲು ಅರ್ಜುನ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಪೀಠಾಪುರಂ‌ ಕ್ಷೇತ್ರದಿಂದ ಸ್ಪರ್ಧೆ ಮಾಡು ತ್ತಿರುವ ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ನಟ ಪವನ್ ಕಲ್ಯಾಣ್ ಪರವಾಗಿ ರಾಮ್ ಚರಣ್ ತೇಜ ಸೇರಿದಂತೆ ಇನ್ನೂ ಕೆಲವರುತೆರಳಿ ಪ್ರಚಾರ ಸಹ ಮಾಡಿದ್ದಾರೆ. ಆದರೆ ಮೆಗಾಸ್ಟಾರ್ ಕುಟುಂಬಕ್ಕೆ ಸೇರಿದ ಅಲ್ಲು ಅರ್ಜುನ್ ಮಾತ್ರ, ಪವನ್ ರ ಎದುರಾಳಿ ಪಕ್ಷವಾದ ವೈಸಿಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರು. ಇದು ಮೆಗಾಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿರೋಧ ಎದುರಾದ ಬೆನ್ನಲ್ಲೆ ಇದೀಗ ಅಲ್ಲು ಅರ್ಜುನ್ ಸ್ಪಷ್ಟನೆ ನೀಡಿದ್ದಾರೆ.

‘ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿಯಲ್ಲ. ರಾಜಕೀಯ ಪಕ್ಷಗಳ ವಿಷಯದಲ್ಲಿ ನಾನು ತಟಸ್ಥ. ಚಿಕ್ಕಪ್ಪ ಪವನ್ ಕ್ಯಲ್ಯಾಣ್ ಪಕ್ಷವಾಗಲಿ, ಗೆಳೆಯ ಶಿಲ್ಪ‌ರವಿಚಂದ್ರನ್ ಆಗಲಿ ಹಾಗೂ ನನ್ನ ಮಾವ ಚಂದ್ರಶೇಖರ ರೆಡ್ಡಿಯವರೇ ಆಗಲಿ ಅವರ ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ. ಆದರೆ ನನ್ನ ಪ್ರೀತಿ ಪಾತ್ರರಿಗೆ ನಾನು ಬೆಂಬಲ ನೀಡುತ್ತೇನೆ. ಅವರು ಯಾವ ಪಕ್ಷ ಎಂಬುದು ನನಗೆ ಮುಖ್ಯವಾಗುವುದಿಲ್ಲ’ ಎಂದಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಪರವಾಗಿ ನಾನು ಎಂದೆಂದೂ ಇರುತ್ತೇನೆ’ ಎಂದೂ ಸಹ ಅಲ್ಲು ಅರ್ಜುನ್ ಹೇಳಿದ್ದಾರೆ.

ಅಂದಹಾಗೆ ಅಲ್ಲು ಅರ್ಜುನ್​ರ ಮಾವ ಚಂದ್ರಶೇಖರ ರೆಡ್ಡಿ ಕಾಂಗ್ರೆಸ್​ನ ಪ್ರಮುಖ ನಾಯಕ.

‘ನನ್ಮ ಆತ್ಮೀಯ ಗೆಳೆಯ ಶಿಲ್ಪಾ ರವಿಗೆ ಬೆಂಬಲ‌ ನೀಡುವುದಾಗಿ ಹೇಳಿದ್ದೆ. ಆದರೆ ಕಳೆದ ಬಾರಿ ಅದು ಸಾಧ್ಯವಾಗಿರಲಿಲ್ಲ ಹಾಗಾಗಿ ಕೊಟ್ಟ ಮಾತು ಉಳಿಸಿಕೊಳ್ಳಲು ಈ ಬಾರಿ ನಾಂದ್ಯಾಲ್ ಗೆ ಹೋಗಿದ್ದೆ’ ಎಂದಿದ್ದಾರೆ ಅಲ್ಲು ಅರ್ಜುನ್. ನಾಂದ್ಯಾಲ್ ಗೆ ಹೋಗಿದ್ದ ಅಲ್ಲು ಅರ್ಜುನ್, ಗೆಳೆಯನಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದರು. ಟ್ವಿಟ್ಟರ್ ನಲ್ಲಿಯೂ ಈ ಬಗ್ಗೆ ಪೊಸ್ಟ್ ಹಂಚಿಕೊಂಡಿದ್ದ ಅಲ್ಲು ಅರ್ಜುನ್, ಅಭೂತಪೂರ್ವ ಸ್ವಾಗತಕ್ಕೆ ನಾಂದ್ಯಾಲ್ ಕ್ಷೇತ್ರದ ಜನರಿಗೆ ಧನ್ಯವಾದ ಹೇಳಿದ್ದರು.

ಅಲ್ಲು ಅರ್ಜುನ್, ತಮ್ಮ ಎದುರಾಳಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಯಾಚನೆ ಮಾಡಿದ್ದಕ್ಕೆ ಅಸಮಾಧಾನ ಹೊರ ಹಾಕಿರುವ ಪವನ್ ಕಲ್ಯಾಣ್, ಚಿರಜೀವಿ ಸಹೋದರ ನಾಗಬಾಬು, ‘ನಮ್ಮವನಾಗಿದ್ದು ವಿರೋಧಿಗಳ ಪರ ನಿಲ್ಲುವವನು ನಮ್ಮವನಾಗಿದ್ದರೂ ಪರಕೀಯ, ನಮ್ಮ ಜೊತೆ ನಿಲ್ಲುವವನು ಪರಕೀಯನಾಗಿದ್ದರೂ ನಮ್ಮವನು’ ಎಂದು ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!