ಆರ್ಥಿಕ ಹೊಡೆತಕ್ಕೆ ಸಿಲುಕಿದ ಪಾಕ್: ಎಲ್ಲಾ ಸರ್ಕಾರಿ ಕಂಪನಿಗಳ ಮಾರಾಟ ಘೋಷಿಸಿದ ಷರೀಫ್ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಪಾಕಿಸ್ತಾನ ಸರ್ಕಾರ ತನ್ನ ಕೊನೆಯ ಮಾರ್ಗ ಎನ್ನುವಂತೆ ದೇಶದಲ್ಲಿನ ಎಲ್ಲಾ ಸರ್ಕಾರಿ ಉದ್ದಿಮೆಗಳ ಕಂಪನಿಗಳನ್ನು ಖಾಸಗೀಕರಣ ಮಾಡುವ ಘೋಷಣೆ ಮಾಡಿದೆ.

ಆಯಕಟ್ಟಿನ ಪ್ರಮುಖ ಉದ್ಯಮಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದಾಗಿ ಪಿಎಂ ಶೆಹಬಾಜ್ ಷರೀಫ್ ಮಂಗಳವಾರ ಘೋಷಿಸಿದರು.

ಷರೀಫ್ ಅವರು ಇಸ್ಲಾಮಾಬಾದ್‌ನಲ್ಲಿ ಖಾಸಗೀಕರಣ ಸಚಿವಾಲಯ ಮತ್ತು ಖಾಸಗೀಕರಣ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ, ಸರ್ಕಾರಿ ಕಂಪನಿಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ .

ARY ನ್ಯೂಸ್‌ನ ವರದಿಯ ಪ್ರಕಾರ, . ಇದರಲ್ಲಿ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣವೂ ಸೇರಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಖಾಸಗೀಕರಣ ಆಯೋಗದೊಂದಿಗೆ ಸಹಕರಿಸುವಂತೆ ಪಾಕಿಸ್ತಾನದ ಪ್ರಧಾನಿ ಎಲ್ಲಾ ಫೆಡರಲ್ ಸಚಿವಾಲಯಗಳಿಗೆ ಸೂಚಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ವ್ಯವಹಾರಗಳ ಖಾಸಗೀಕರಣವು ತೆರಿಗೆದಾರರ ಹಣವನ್ನು ಉಳಿಸುತ್ತದೆ ಮತ್ತು ಜನರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ.

ಎಆರ್‌ವೈ ನ್ಯೂಸ್‌ನ ವರದಿಯನ್ನು ಉಲ್ಲೇಖಿಸಿದ ಎಎನ್‌ಐ, ಸರ್ಕಾರದ ಕೆಲಸ ವ್ಯಾಪಾರ ಮಾಡುವುದು ಅಲ್ಲ ಆದರೆ ವ್ಯಾಪಾರ ಮತ್ತು ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಎಂದು ಹೇಳಿದೆ. ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಕಂಪನಿ ಲಿಮಿಟೆಡ್ (ಪಿಐಎ) ಖಾಸಗೀಕರಣ ಸೇರಿದಂತೆ ಇತರ ಕಂಪನಿಗಳ ಬಿಡ್ಡಿಂಗ್ ಮತ್ತು ಇತರ ಪ್ರಮುಖ ಪ್ರಕ್ರಿಯೆಗಳನ್ನು ನೇರ ಪ್ರಸಾರ ಮಾಡಲು ಷರೀಫ್ ನಿರ್ದೇಶಿಸಿದ್ದಾರೆ.

ಖಾಸಗೀಕರಣಕ್ಕೆ ಸಮಿತಿಯನ್ನು ನೇಮಕ: ಪಿಐಎ ಖಾಸಗೀಕರಣಕ್ಕೆ ಪೂರ್ವ ಅರ್ಹತಾ ಪ್ರಕ್ರಿಯೆಯು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಪಿಎಂ ಷರೀಫ್ ಈ ಸಭೆಯಲ್ಲಿ ತಿಳಿಸಿದರು. ವರದಿಯ ಪ್ರಕಾರ, ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ವ್ಯವಹಾರಗಳನ್ನು ಆದ್ಯತೆಯ ಆಧಾರದ ಮೇಲೆ ಖಾಸಗೀಕರಣಗೊಳಿಸಲಾಗುವುದು. ಖಾಸಗೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಲು, ಖಾಸಗೀಕರಣ ಆಯೋಗದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!