ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ , ಅಮ್ಮ ಸೋನಿಯಾ ಗಾಂಧಿ ವಿಚಾರವಾಗಿ ಮಾತನಾಡಿದ್ದಾರೆ.
ಸದಾ ರಾಜಕೀಯದ ಕುರಿತು ಮಾತನಾಡುವ ರಾಹುಲ್ ಈ ಬಾರಿ ಅಮ್ಮ ಸೋನಿಯಾ ಗಾಂಧಿಯ ಪ್ರೀತಿಯ ಬಗ್ಗೆ ಇನ್‌ಸ್ಟಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಕ್ಯಾಂಡೀಡ್ ಫೋಟೋವನ್ನು ಹಂಚಿಕೊಂಡಿದ್ದು, ಅಮ್ಮನ ಪ್ರೀತಿ ನನಗೂ ಇಲ್ಲ, ಪ್ರಿಯಾಂಕಾಗೂ ಇಲ್ಲ, ನಮ್ಮ ಮನೆಯ ನಾಯಿ ನೂರಿಗೆ ಅಂತ ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಕಳೆದ 24 ಗಂಟೆಗಳಲ್ಲಿ 7,81,596 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ 5,400ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.
ʻನೂರಿʼ ಎಂಬ ನಾಯಿ ಮರಿಯನ್ನು ಎತ್ತು ಮುದ್ದಾಡುತ್ತಿರುವ ಫೋಟೋವನ್ನು ರಾಹುಲ್ ಗಾಂಧಿ ಹಂಚಿಕೊಂಡ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಗೋವಾದಲ್ಲಿ ಖರೀದಿಸಿದ್ದ ಪ್ರೀತಿಯ ನಾಯಿಮರಿ ʻನೂರಿʼಯನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಪ್ರಾಣಿಗಳು ನಮಗೆ ನಿಶ್ಕಲ್ಮಷ ಪ್ರೀತಿ ಎಂದರೇನು ಎಂಬುದನ್ನು ತಿಳಿಸಿಕೊಡುತ್ತವೆ. ಹಾಗೆಯೇ ನೂರಿ ನಮ್ಮ ಜೊತೆಗೆ ಜೀವಿಸುತ್ತಿದ್ದಾಳೆ ಅಂತಲೂ ಹೇಳಿದ್ದರು. ಇದೀಗ ಪ್ರೀತಿಯ ನೂರಿಯ ವೀಡಿಯೋವನ್ನು ಹಂಚಿಕೊಂಡಿದ್ದು, ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ.
ಈಗಲಾದರೂ ಆಕೆ ನೆಮ್ಮದಿಯ ಜೀವನ ನಡೆಸಲಿ