ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಟ್ನಲ್ಲಿ ಗಾಯವಾಗಿದ್ದಕ್ಕೆ ಮಲಯಾಳಂ ನಟಿಯೊಬ್ಬರು ತಮಗೆ ಐದು ಕೋಟಿ ರೂಪಾಯಿ ಹಣವನ್ನು ಪರಿಹಾರವನ್ನಾಗಿ ಕೊಡಬೇಕೆಂದು ಪ್ರಕರಣ ದಾಖಲಿಸಿದ್ದಾರೆ.
ಮಲಯಾಳಂ ನಟಿ ಶೀಥಲ್ ತಂಬಿ ಎಂಬುವರು ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯವರ್ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಗಾಯಕ್ಕೆ ಪರಿಹಾರವಾಗಿ ಐದು ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶೀಥಲ್ ತಂಬಿ, ‘ಫುಟೇಜ್’ ಹೆಸರಿನ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಆಕ್ಷನ್ ದೃಶ್ಯದ ಚಿತ್ರೀಕರಣದ ಸಂದರ್ಭ ನಡೆದ ಅವಘಡದಲ್ಲಿ ಶೀಥಲ್ಗೆ ಗಾಯವಾಗಿದೆ. ಚಿತ್ರೀಕರಣದ ಸಮಯದಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲದ ಕಾರಣವೇ ತಮಗೆ ಗಾಯವಾಗಿದೆ ಎಂದಿರುವ ಶೀಥಲ್, ಗಾಯಗೊಂಡ ದಿನ ತಮಗೆ ಆಂಬುಲೆನ್ಸ್ ಸೇವೆ ಸಹ ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.
ಗಾಯಗಿಂದ ತಮ್ಮ ವೃತ್ತಿ ಜೀವನಕ್ಕೆ ಸಮಸ್ಯೆ ಆಗಿದ್ದು, ಇನ್ನು ಮುಂದೆ ನಟಿಸಲು ನನಗೆ ಸಾಧ್ಯ ಆಗದೇ ಹೋಗಬಹುದು ಹಾಗಾಗಿ ಪರಿಹಾರವಾಗಿ ನನಗೆ ಐದು ಕೋಟಿ ರೂಪಾಯಿ ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಟಿ ಮಂಜು ವಾರಿಯರ್, ‘ಫುಟೇಜ್’ ಸಿನಿಮಾದ ಸಹ ನಿರ್ಮಾಪಕಿ ಆಗಿರುವ ಕಾರಣ, ದೂರಿನಲ್ಲಿ ಅವರ ಹೆಸರನ್ನೂ ಸಹ ಉಲ್ಲೇಖಿಸಲಾಗಿದ್ದು, ತಮಗೆ ಐದು ಕೋಟಿ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಜು ವಾರಿಯರ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಮಂಜು ವಾರಿಯರ್. 1995 ರಿಂದಲೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮಂಜು ವಾರಿಯರ್ ಮಲಯಾಳಂ ಮಾತ್ರವೇ ಅಲ್ಲದೆ ತಮಿಳಿನ ಕೆಲವು ಸಿನಿಮಾಗಳಲ್ಲಿಯೂ ನಟಸಿದ್ದಾರೆ.