ಪಕ್ಷದಲ್ಲಿ ರಮ್ಯ ಸ್ಥಾನವೇನು ಎಂಬುದು ಗೊತ್ತಿಲ್ಲ: ನಲಪಾಡ್

ಹೊಸದಿಗಂತ ವರದಿ, ಮೈಸೂರು:

ಮಾಜಿ ಸಂಸದೆ, ಚಿತ್ರ ನಟಿ ರಮ್ಯ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ವಿಚಾರಗಳಿದ್ದರೂ ಮಾತುಕತೆಯ ಮೂಲಕ ತಿಳಿಸಬೇಕು. ಏನಿದ್ದರೂ ದೂರವಾಣಿ ಮೂಲಕ ತಿಳಿಸುವಂತೆ ರಮ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ತಿಳಿಸಿದರು.
ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮ್ಯಾ ಆ ರೀತಿ ಟ್ವಿಟ್ ಮಾಡಬಾರದಿತ್ತು. ಸಾಮಾಜಿಕ ಜಾಲತಾಣದಲ್ಲಿ ಆ ರೀತಿ ಹಾಕಬಾರದಿತ್ತು. ರಮ್ಯಾ ಮಾಜಿ ಸಂಸದರು ಎಂಬುದನ್ನು ಹೊರತುಪಡಿಸಿ ಪಕ್ಷದಲ್ಲಿ ಅವರೇನೆಂಬುದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಅವರ ಸ್ಥಾನವೇನು ಎಂಬುದು ಗೊತ್ತಿಲ್ಲ. ಆದರೆ
ನಾನು ರಮ್ಯ ವಿರುದ್ಧವಲ್ಲ, ಕಿರಿಯ ವಯಸ್ಸಿನಲ್ಲಿಯೇ ಅವರು ಸಂಸದರಾಗಿದ್ದವರು. ರಮ್ಯ ಟ್ವಿಟ್ ಗೆ ಪ್ರತಿಯಾಗಿ ನಾನು ಟ್ವೀಟ್ ಮಾಡಿಲ್ಲ. ಯಾವುದೇ ವಿಚಾರಗಳಿದ್ದರೂ ಮಾತುಕತೆ ಮೂಲಕ ತಿಳಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹಾಕಬಾರದು ಎಂದರು.
ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ, ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ. ಯೂತ್ ಕಾಂಗ್ರೆಸ್ ಬಲಪಡಿಸುವುದಷ್ಟೇ ನನ್ನ ಕೆಲಸ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!