Friday, January 9, 2026

ಕುಮಾರಸ್ವಾಮಿ ಪಾಠ ಕೇಳುವ ಅಗತ್ಯ ನನಗಿಲ್ಲ: HDKಗೆ ಡಿಕೆಶಿ ಖಡಕ್ ಟಾಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

“ನನಗೆ ರಾಜಕೀಯದಲ್ಲಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚಿನ ಅನುಭವವಿದೆ. ಆಡಳಿತ ನಡೆಸುವ ರೀತಿ ನನಗೆ ಗೊತ್ತು, ಅವರಿಂದ ಕಲಿಯುವ ಅವಶ್ಯಕತೆ ನನಗಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೇರ ತಿರುಗೇಟು ನೀಡಿದ್ದಾರೆ.

ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಕ್ಕೆ ಕುಮಾರಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, “ನಾನು ದೀರ್ಘಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾರೊಂದಿಗೆ ಸಭೆ ಮಾಡಬೇಕು, ಹೇಗೆ ಆಡಳಿತ ನಡೆಸಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನಾನು ಸಿಎಂ ಆಗದೇ ಇರಬಹುದು, ಆದರೆ ಅನುಭವದಲ್ಲಿ ಯಾರಿಗೂ ಕಡಿಮೆ ಇಲ್ಲ” ಎಂದು ಕುಟುಕಿದರು.

ಇದೇ ವೇಳೆ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆಯನ್ನು ಅವರು ಪ್ರಕಟಿಸಿದರು. “ನಗರದ ವಿವಿಧ ಭಾಗಗಳಿಂದ ಒಟ್ಟು 779 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜನವರಿ 10ರೊಳಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿ. ಕೊನೆಯ ಘಳಿಗೆಯಲ್ಲಿ ಬಂದರೆ ಅಭ್ಯರ್ಥಿಗಳ ನಿಷ್ಠೆ ಮತ್ತು ಕೆಲಸವನ್ನು ಪರಿಶೀಲಿಸಲು ಕಷ್ಟವಾಗುತ್ತದೆ. ಶೀಘ್ರವೇ ವರದಿ ಪಡೆದು ಅರ್ಹರಿಗೆ ಟಿಕೆಟ್ ನೀಡಲಾಗುವುದು” ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.

error: Content is protected !!