ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಾಗ್ಲೈಡಿಂಗ್ ಎಂದರೆ ಎಂತೆಂಥಾ ಮನುಷ್ಯರಿಗೇ ಭಯ ಕಾಡುತ್ತದೆ. ಇನ್ನು ಪ್ರಾಣಿಗಳನ್ನು ಕೂರಿಸಿಕೊಂಡು ಪ್ಯಾರಾಗ್ಲೈಡಿಂಗ್ ಮಾಡೋದು ಅನ್ನೋದನ್ನು ಊಹಿಸೋದು ಕಷ್ಟ..
ಆದರೆ ಇಂಥದ್ದೊಂದು ಸಾಹದ ವಿಡಿಯೋ ಇದೀಗ ವೈರಲ್ ಆಗಿದೆ. ಲ್ಯಾಡ್‌ಬೈಬಲ್ ಎನ್ನುವ ಖಾತೆಯಿಂದ ವಿಡಿಯೋ ಒಂದು ಪೋಸ್ಟ್ ಆಗಿದ್ದು, ಮಾಲೀಕ ಹಾಗೂ ನಾಯಿ ಒಟ್ಟಿಗೇ ಪ್ಯಾರಾಗ್ಲೈಡಿಂಗ್ ಮಾಡಿದ್ದಾರೆ.
ಪ್ಯಾರಾಗ್ಲೈಡಿಂಗ್ ವೇಳೆ ನನಗ್ಯಾಕೆ ಬೇಕು ಇದೆಲ್ಲ, ಭೂಮಿ ಮೇಲೆ ನಡೆದುಕೊಂಡು ಹಾಯಾಗಿದ್ದೆ ಎನ್ನುವಂತೆ ನಾಯಿ ಮುಖದ ಭಾವನೆ ಇದೆ. ನಾಯಿ ಖುಷಿಯಾಗಿಲ್ಲ, ಸಿಕ್ಕಾಪಟ್ಟೆ ಶಾಕ್‌ನಲ್ಲಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದು ಎಂಜಾಯ್‌ಮೆಂಟ್ ಎಂದು ಕೆಲವರು ಹೇಳಿದ್ರೆ, ಇದು ಪ್ರಾಣಿಗೆ ಹಿಂಸೆ ಆಗುತ್ತಿದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ.