”ನನಗೆ ನಾಟಕ ಮಾಡೋಕೆ ಬರಲ್ಲ, ನಾನು ಅತ್ತಿದ್ದು ನಿಜ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಯಾಲಿಟಿ ಶೋಗಳಲ್ಲಿ ರಿಯಾಲಿಟಿ ಕಡಿಮೆ ಅನ್ನೋದು ಹಲವರ ಅಭಿಪ್ರಾಯ.
ಬೇಕಂತಲೇ ಕಂಟೆಸ್ಟೆಂಟ್‌ಗಳ ನೋವಿನ ಕಥೆ ತೋರಿಸಿ, ತಾವೂ ಅತ್ತು ಅವರನ್ನೂ ಅಳಿಸಿ ಜೊತೆಗೆ ವೀಕ್ಷಕರನ್ನೂ ಅಳಿಸುತ್ತಾರೆ ಅನ್ನೋದು ಜನರ ಮಾತು.

ಹುನರ್‌ಬಾಜ್ ರಿಯಾಲಿಟಿ ಶೋನಲ್ಲಿ ಪರಿಣಿತಿ ಚೋಪ್ರಾ ಜಡ್ಜ್ ಆಗಿದ್ದಾರೆ. ಈ ವೇಳೆ ಸ್ಪರ್ಧಿಯ ನೋವಿನ ಕಥೆ ಕೇಳಿ ಕಣ್ಣೀರಿಟ್ಟಿದ್ದರು. ಇದಕ್ಕೆ ನೆಟ್ಟಿಗರು ಎಲ್ಲಾ ನಾಟಕ, ಟಿಆರ್‌ಪಿಗಾಗಿ ಎಂದು ಪರಿಣಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪರಿ ಇದಕ್ಕೆಲ್ಲಾ ಉತ್ತರ ನೀಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಗಳಗಳನೆ ಅತ್ತ ಪರಿಣೀತಿ ಚೋಪ್ರಾ; ಇದು ಫೇಕ್​ ಎಂದವರಿಗೆ ನಟಿಯ ತಿರುಗೇಟುನಾನು ಏನಾದರೂ ಮಾಡ್ತೀನಿ ಆದರೆ ನಾಟಕ ಮಾತ್ರ ಮಾಡೋದಿಲ್ಲ. ಮನಸ್ಸಿನ ಭಾವನೆ ಆ ಕ್ಷಣಕ್ಕೆ ಹೇಗೆ ವ್ಯಕ್ತವಾಗುತ್ತದೋ ಹಾಗೆ ತೋರಿಸುತ್ತೇನೆ. ಜೀವನ ಮಾಡೋದಕ್ಕೂ ಕಷ್ಟಪಡೋ ಮಂದಿಯನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಅವರಿಗೆ ಅನ್ಯಾಯ ಆಗಿದೆ ಎನಿಸುತ್ತದೆ. ಅಂಥ ಸಂದರ್ಭದಲ್ಲಿ ನಾನು ಭಾವುಕಳಾಗಿದ್ದೇನೆ. ಇದರಲ್ಲಿ ಫೇಕ್ ಏನೂ ಇಲ್ಲ ಎಂದು ಪರಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!