ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೆ ಕ್ಯಾನ್ಸರ್ ಇದೆ, ಆರು ತಿಂಗಳು ಮಾತ್ರ ಬದುಕುತ್ತೇನೆ ಈ ವಿಷಯ ಅಪ್ಪ ಅಮ್ಮನಿಗೆ ಗೊತ್ತಾಗೋದು ಬೇಡ ಎಂದು ಬಾಲಕನೊಬ್ಬ ವೈದ್ಯರ ಬಳಿ ವಿನಂತಿಸಿಕೊಂಡಿದ್ದಾನೆ.
ಇತ್ತ ಬಾಲಕನ ಪೋಷಕರು ಮಗನಿಗೆ ಕ್ಯಾನ್ಸರ್ ಇದೆ, ಅವನಿಗೆ ವಿಷಯ ತಿಳಿಯೋದು ಬೇಡ ಎಂದು ವಿನಂತಿಸಿಕೊಂಡಿದ್ದಾರೆ. ಡಾ. ಸುಧೀರ್ ಕುಮಾರ್ ಬಳಿ ಮಗ ಹಾಗೂ ಪೋಷಕರು ಬೇರೆ ಬೇರೆ ಸಮಯದಲ್ಲಿ ಮನವಿ ಮಾಡಿದ್ದು, ವೈದ್ಯರು ಬೇಸರಿಸಿಕೊಂಡಿದ್ದಾರೆ.
ಮೆದುಳಿನ ಎಡಭಾಗದ ಗ್ಲಿಯೋಬ್ಲಾಸ್ಟೋಮಾ ಮಲ್ಟಿಫಾರ್ಮ್ ನಾಲ್ಕನೇ ಹಂತದಲ್ಲಿದೆ ಎಂದು ಬಾಲಕ ತಿಳಿದ ನಂತರ ಗೂಗಲ್ ಮಾಡಿ ಇದರ ಬಗ್ಗೆ ತಿಳಿದುಕೊಂಡೆ. ಆರು ತಿಂಗಳು ಬದುಕಿರುತ್ತೇನೆ. ಅಪ್ಪ ಅಮ್ಮ ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ. ಅವರಿಗೆ ವಿಷಯ ತಿಳಿಯೋದು ಬೇಡ ಎಂದಿದ್ದಾನೆ.
ಇದಾದ ಎಂಟು ತಿಂಗಳ ನಂತರ ಬಾಲಕನ ಪೋಷಕರು ಆಸ್ಪತ್ರೆಗೆ ಬಂದಿದ್ದು, ನೀವು ಮಗನಿಗೆ ವಿಷಯ ಹೇಳಿಲ್ಲದ್ದು ಒಳ್ಳೆಯದಾಯಿತು. ಅವನಿಗಾಗಿ ರಜೆ ಪಡೆದು ಊರೆಲ್ಲಾ ಸುತ್ತಿದೆವು. ಈಗ ಅವನು ನಮ್ಮ ಜೊತೆ ಇಲ್ಲ ಎಂದಿದ್ದಾರೆ.
ವೈದ್ಯರು ಅಲ್ಲೇ ಕಣ್ಣೀರಾಗಿದ್ದಾರೆ, ನಿಮ್ಮ ಮಗನಿಗೆ ಕ್ಯಾನ್ಸರ್ ಇದ್ದ ವಿಷಯ ತಿಳಿದಿತ್ತು ಎಂದು ಹೇಳಿದಾಗ ತಂದೆ ತಾಯಿ ಅಲ್ಲೇ ಕುಸಿದು ಬಿದ್ದಿದ್ದಾರೆ.
ಈ ಬಗ್ಗೆ ವೈದ್ಯರು ಟ್ವೀಟ್ ಮಾಡಿದ್ದು, ಟ್ವೀಟ್ ಓದಿದವರು ಕಣ್ಣಾಲಿಗಳು ಒದ್ದೆಯಾಗಿವೆ.