ಸರ್ಚ್ ವಾರಂಟ್ ವಿಚಾರದಲ್ಲಿ ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್: ಬೈರತಿ ಸುರೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಾಯುಕ್ತ ಸರ್ಚ್ ವಾರೆಂಟ್ ವಿಚಾರವಾಗಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಮುಡಾ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಚ್ ವಾರಂಟ್ ಕೊಟ್ಟವರು ಯಾರು? ದಾಳಿ ಮಾಡಬೇಡಿ ಅಂತ ಲೋಕಾಯುಕ್ತವನ್ನು ತಡೆದವರು ಯಾರು? ಲೋಕಾ ಮೇಲೆ ಯಾರಾದ್ರೂ ಪ್ರೆಷರ್ ಹಾಕಲು ಆಗುತ್ತಾ? ಏನು ನಡೆಯುತ್ತಿದೆ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಲೋಕಾಯುಕ್ತ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಅವರನ್ನು ಹೋಗಿ ಕೇಳಲಿ. ದಿನ ಬೆಳಗಾದರೆ ತನಿಖೆಯೊಳಗೆ ಮೂಗು ತೂರಿಸೋದು ಸರಿಯಾ? ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್. ಲೋಕಾಯುಕ್ತವೇ ಸರಿ ಇಲ್ಲ ಅಂದರೆ ತನಿಖೆ ಯಾರಿಗೆ ಕೊಡೋಣ. ಇದು ಕೊನೆ ಇಲ್ಲದ ಪ್ರಶ್ನೆ ಎಂದು ಕಿಡಿಕಾರಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!