20 ವರ್ಷಗಳಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

20 ವರ್ಷಗಳಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ, ನಮ್ಮ ಕರ್ತವ್ಯ ನಾವು ಮಾಡಿಕೊಂಡು ಹೋಗೋಣ ಎಂದು ಪ್ರಧಾನಿ ಮೋದಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್‌ಗೆ ಹೇಳಿದ್ದಾರೆ.

ತೃಣಮೂಲ ಸಂಸದರೊಬ್ಬರು ಸಂಸತ್ ಆವರಣದಲ್ಲಿಯೇ ಧನ್ಕರ್ ಅವರನ್ನು ಅವಮಾನಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಧನ್ಕರ್‌ಗೆ ಕರೆ ಮಾಡಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಧನ್ಕರ್ ಎಕ್ಸ್ ಖಾತೆಯಲ್ಲಿ ಪ್ರಧಾನಿ ಫೋನ್ ಮಾಡಿ ಮಾತನಾಡಿದ್ದು, ಈ ನಡೆ ಬೇಸರ ತಂದಿದೆ, ನನಗೂ 20 ವರ್ಷದಿಂದ ಅವಮಾನ ಆಗುತ್ತಲೇ ಇದೆ. ಅವುಗಳನ್ನು ದಾಟಿ ಮುನ್ನಡೆಯೋಣ. ಭಾರತದ ಉಪರಾಷ್ಟ್ರಪತಿಗೆ ಈ ರೀತಿ ಮಾಡಿದ್ದು ದುರದೃಷ್ಟಕರ ಎಂದು ಮೋದಿ ಹೇಳಿರುವುದಾಗಿ ಬರೆದುಕೊಂಡಿದ್ದಾರೆ.

ಸಂಸತ್ ಇತಿಹಾಸದಲ್ಲೇ ಗರಿಷ್ಠಮಟ್ಟದಲ್ಲಿ ಸಂಸದರನ್ನು ಅಮಾನತು ಮಾಡಲಾಗಿದೆ. ಈ ವೇಳೆ ಅಮಾನತಾಗಿರೋ ಸಂಸದರು ಪ್ರತಿಭಟನೆ ವೇಳೆ ಅಣಕು ಸಂಸತ್ ಮಾಡಿದ್ದಾರೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಧನ್ಕರ್ ಅವರನ್ನು ಮಿಮಿಕ್ರಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!