Thursday, June 30, 2022

Latest Posts

ನಾನು ಹಿಜಾಬ್ ವಿಚಾರ ಮಾತನಾಡಿಲ್ಲ, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುವುದನ್ನು ಪ್ರಶ್ನೆಯೇ ಮಾಡಿಲ್ಲ: ಸಿದ್ದರಾಮಯ್ಯ

ಹೊಸದಿಗಂತ ವರದಿ, ಮೈಸೂರು:

ನಾನು ಹಿಜಾಬ್ ವಿಚಾರ ಮಾತನಾಡಿಲ್ಲ, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುವುದನ್ನು ಪ್ರಶ್ನೆಯೇ ಮಾಡಿಲ್ಲ. ಸಮವಸ್ತçದ ಜೊತೆ ಅದೇ ಬಣ್ಣದ ದುಪ್ಪಟ್ಟಾಕ್ಕೆ ಅವಕಾಶ ನೀಡಿ ಎಂದು ಕೇಳಿದ್ದೇನೆ. ಇದರಲ್ಲಿ ತಪ್ಪೇನು, ನಾನು ಸಲಹೆ ಕೊಟ್ಟಿದ್ದೇನೆ ಸ್ವೀಕರಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಮೈಸೂರಿನ ಟಿ.ಕೆಲೇಔಟಿನ ಮನೆಯ ಮುಂಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ಬೇರೆ, ಬುರ್ಖಾ ಬೇರೆ, ದುಪ್ಪಟ ಬೇರೆ, ಮೂರೂ ಒಂದೇ ಅಲ್ಲ, ನಾನು ಹಿಜಾಬ್ ಧರಿಸುವ ಬಗ್ಗೆ ಪ್ರಶ್ನೆಯನ್ನೇ ಮಾಡಿಲ್ಲ, ನಾನು ಹೇಳಿದ್ದು ಸಮವಸ್ತçದೊಂದಿಗೆ ಅದೇ ಬಣ್ಣದ ದುಪ್ಪಟ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್‌ರಿಗೆ ಹೇಳಿ ಒತ್ತಾಯ ಮಾಡಿದ್ದೇನೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿ, ಶಿಕ್ಷಣದಿಂದ ಅವರು ವಂಚಿತರಾಗದೊoದಿಗೆ ಸರ್ಕಾರ ನೋಡಿಕೊಳ್ಳಬೇಕಾಗಿದೆ ಎಂದರು.
ದುಪ್ಪಟ್ಟಾ ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಹೇಳಿದ್ದೇನೆ. ನಾನು ಸಮವಸ್ತçದ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.
ಮಠಾಧೀಶರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ, ನಾನು ಮಠಾಧೀಶರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ, ಮಠಗಳು, ಮಠಾಧೀಶರೊಂದಿಗೆ ಉತ್ತಮ ಸಂಬoಧ ಹೊಂದಿದ್ದೇನೆ. ಹಾಗಾಗಿಯೇ ಆಗಾಗ ಮಠಗಳಿಗೆ ಹೋಗಿ ಬರುತ್ತಿರುತ್ತೇನೆ, ನನಗೆ ಹಿಂದಿನಿAದಲೂ ಸ್ವಾಮೀಜಿಗಳ ಬಗ್ಗೆ ಅಪಾರವಾದ ಗೌರವವಿದೆ ಎಂದು ವಿವಾದಕ್ಕೆ ತೇಪೆ ಹಾಕುವ ಪ್ರಯತ್ನ ಮಾಡಿದರು.
ಮಾಧ್ಯದವರ ಮೇಲೆ ಗರಂ:
ಮಾಧ್ಯಮದವರು ನೀವೇ ಪ್ರಶ್ನೆ ಕೇಳುತ್ತೀರಾ, ನೀವೇ ವಿವಾದ ಮಾಡುತ್ತೀರಾ. ಯಾವುದಕ್ಕೋ ಯಾವುದನ್ನು ಲಿಂಕ್ ಮಾಡಿ ವಿವಾದ ಸೃಷ್ಟಿ ಮಾಡುತ್ತೀರಾ ಎಂದು ಮಾಧ್ಯಮದವರ ಮೇಲೆ ಇದೇ ವೇಳೆ ಸಿದ್ದರಾಮಯ್ಯ ಗರಂ ಆದರು.
ನಿನ್ನೆ ನಾನು ಮಾತನಾಡುವಾಗ ಹಿಜಾಬ್ ಪದವನ್ನೇ ಬಳಸಿಲ್ಲ. ಹಿಜಾಬೇ ಬೇರೆ, ದುಪ್ಪಟ್ಟಾವೇ ಬೇರೆ, ಬುರ್ಕಾನೇ ಬೇರೆ. ಜನ ಸಾರ್ವಜನಿಕವಾಗಿ ಯಾವ ಯಾವ ವಸ್ತು ಬಳಸುತ್ತಾರೆ ಎಂದು ಹೇಳಿದ್ದೇನೆ. ಇದನ್ನು ನೀವು ಯಾವುದ್ಯಾವುದಕ್ಕೋ ಲಿಂಕ್ ಮಾಡಿ ವಿವಾದ ಸೃಷ್ಟಿ ಮಾಡಿದ್ದೀರಿ ಎಂದು ಮಾಧ್ಯಮದವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿ ಗರಂ ಆಗಿ ಉತ್ತರ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss