ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ (BJP) ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಕಾಂಗ್ರೆಸ್ (Congress) ಸೇರ್ಪಡೆಗೊಂಡಿದ್ದಾರೆ.
ನಾನು ಕಾಂಗ್ರೆಸ್‍ನ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರಿದ್ದೇನೆ.ಬಹಳ ದಿನಗಳಿಂದ ನನ್ನನ್ನ ಅಧ್ಯಕ್ಷರು ಸಂಪರ್ಕ ಮಾಡಿದ್ದರು. ಈಗಲೂ ಕೃಷ್ಣಪ್ಪ ಕುಟುಂಬಕ್ಕೆ ಅವರು ಗೌರವ ಕೊಡುತ್ತಾರೆ. ನನ್ನನ್ನ ಯಾವಾಗಲು ಕಾಂಗ್ರೆಸ್ ಕೃಷ್ಣಪ್ಪನವರ ಮಗಳು ಎಂದು ಪರಿಚಯ ಮಾಡಿಕೊಡುತ್ತಿದ್ದರು. ಕಾರಣಾಂತರಗಳಿಂದ ಕಹಿ ಘಟನೆಯಿಂದ ನಮ್ಮ ತಂದೆ ಕೃಷ್ಣಪ್ಪನವರು ಪಕ್ಷ ಬಿಟ್ಟಿದ್ದರು. ಎಲ್ಲರ ಅಪೇಕ್ಷೆಯಂತೆ ಈ ದಿನ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ ಎಂದರು.
ಸಿಎಂ, ಡಿಸಿಎಂ ಅವರು ಹಿಂದುಳಿದ ವರ್ಗಗಳ ಕೆಳ ಸಮುದಾಯಕ್ಕೆ ಹೆಚ್ಚು ಅವಕಾಶ ಕೊಡಬೇಕು. ಕಾಂಗ್ರೆಸ್‍ನ ರಕ್ತ ನಿನ್ನಲ್ಲಿ ಇದೆ ಎಂದು ಅನೇಕರು ನನಗೆ ಹೇಳುತ್ತಿದ್ದರು. ಈಗ ಕಾಂಗ್ರೆಸ್‍ನಲ್ಲಿ ಪ್ರಯಾಣ ಶುರುವಾಗಲಿದೆ ಎಂದಿದ್ದಾರೆ.