ಉಕ್ರೇನ್‌ ಬಗ್ಗೆ ನಿಮ್ಮ ಕಾಳಜಿ ಅರಿವಿದೆ, ಶೀಘ್ರದಲ್ಲೇ ಎಲ್ಲವೂ ಅಂತ್ಯ: ಪ್ರಧಾನಿ ಮೋದಿಗೆ ಪುಟಿನ್ ಭರವಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇಂದು ಶಾಂಘೈ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಮಾತು ವಿಶ್ವದ ಹಲವು ರಾಷ್ಟ್ರಗಳಲ್ಲಿ ನೆಮ್ಮದಿ ತರಿಸಿದೆ.

ಹೌದು, ಪುಟಿನ್ ಅವರು ಪ್ರಧಾನಿ ಮೋದಿ ಬಳಿ , ಉಕ್ರೇನ್‌ನಲ್ಲಿ ಸಂಘರ್ಷದ ಬಗ್ಗೆ ನೀವು ತೋರಿಸುತ್ತಿರುವ ಕಾಳಜಿ ಬಗ್ಗೆ ನಮಗೆ ಅರಿವಿದೆ. ಭಾರತದ ಸ್ಥಾನದ ಬಗ್ಗೆಯೂ ತಿಳಿದಿದೆ. ಆದಷ್ಟು ಬೇಗ ಎಲ್ಲವೂ ಮುಗಿಯಲಿ ಎಂದು ನಾವು ಬಯಸುತ್ತೇವೆ. ಉಕ್ರೇನ್‌ನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

ಮಾತುಕತೆಯಲ್ಲಿ ಭಾರತದ ನಿಲುವು, ಯುದ್ಧ ಕೈಬಿಟ್ಟು ಶಾಂತಿ ಮಾತುಕತೆಗೆ ನೀಡಿರುವ ಆದ್ಯತೆಯನ್ನು ಪುಟಿನ್ ಸ್ಮರಿಸಿದ್ದಾರೆ. ಯುದ್ಧ ಅಂತ್ಯದ ಕುರಿತು ಪುಟಿನ್ ಆಡಿರುವ ಮಾತುಗಳು ಇದೀಗ ಹಲವು ದೇಶಗಳಿಗೆ ನೆಮ್ಮದಿ ತಂದಿದೆ.

ರಷ್ಯಾ ಉಕ್ರೇನ್ ಯುದ್ಧದ ವೇಳೆ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಶಾಂತಿ ಮಾತುಕತಗೆ ಆಗ್ರಹಿಸಿದ್ದರು. ಈ ವೇಳೆ ತಟಸ್ಥ ನಿಲುವು ತಾಳಿದ ಭಾರತ ಯುದ್ಧಕ್ಕಿಂತ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಸೂಚಿಸಿತ್ತು.

ಶಾಂಘೈ ಸಹಕಾರ ಶೃಂಗದಲ್ಲಿ ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಚಾರಗಳು, ಶಾಂಘೈ ಸಹಕಾರ ಸಂಘದ ವಿಸ್ತರಣೆ, ಪರಸ್ಪರ ಪ್ರಯೋಜನಕಾರಿ ಸಹಭಾಗಿತ್ವವನ್ನು ಇನ್ನಷ್ಟುಬಲಪಡಿಸುವ ಕುರಿತು ಶಾಂಘೈ ಶೃಂಗಸಭೆಯಲ್ಲಿ ಮೋದಿ ಮಾತನಾಡಿದ್ದರು. ಇದಕ್ಕಾಗಿ ಮೋದಿ ಎರಡು ದಿನದ ಉಜ್ಬೇಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಪುಟಿನ್ ಸೇರಿದಂತೆ ಶಾಂಘೈ ಶೃಂಗಸಭೆ ಸದಸ್ಯ ರಾಷ್ಟ್ರಗಳ ಪ್ರಮುಖ ನಾಯಕರ ಜೊತೆ ಮೋದಿ ಚರ್ಚೆ ನಡೆಸಿದ್ದಾರೆ. ವಿವಿಧ ದೇಶದ ನಾಯಕರೊಂದಿಗೆ ವಲಯದ ಭದ್ರತೆ, ಭಯೋತ್ಪಾದನಾ ನಿಗ್ರಹ, ಸಹಕಾರ, ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!