ಸ್ನೇಹಪರ ದೇಶಗಳು ಪಾಕ್ ಅನ್ನು ಹಣಕ್ಕಾಗಿ ಭಿಕ್ಷೆ ಬೇಡುತ್ತಿರುವ ದೇಶವೆಂದು ಭಾವಿಸುತ್ತವೆ: ಪ್ರಧಾನಿ ಶರೀಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನಮ್ಮ ಸ್ನೇಹಪರ ದೇಶಗಳು ಸಹ ಪಾಕಿಸ್ತಾನವನ್ನು ಯಾವಾಗಲೂ ಹಣಕ್ಕಾಗಿ ಭಿಕ್ಷೆ ಬೇಡುತ್ತಿರುವ ದೇಶವೆಂದು ನೋಡಲು ಪ್ರಾರಂಭಿಸಿವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರು ವಿಷಾದಿಸಿದ್ದಾರೆ.
ಪಾಕಿಸ್ತಾನದ ಡಾನ್ ನ್ಯೂಸ್ ಪಾಕ್ ಪ್ರಧಾನಿ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಶರೀಫ್ , ನಾವು ಯಾವುದೇ ಸ್ನೇಹಪರ ದೇಶಕ್ಕೆ ಹೋದಾಗ ಅಥವಾ ದೂರವಾಣಿ ಕರೆ ಮಾಡಿದಾಗ, ನಾವು ಹಣಕ್ಕಾಗಿ ಭಿಕ್ಷೆ ಬೇಡಲು ಬಂದಿದ್ದೇವೆ ಎಂದು ಅವರು ಭಾವಿಸುತ್ತಾರೆ ಎಂದು ಹೇಳಿದ್ದಾರೆ.
ನಾವು ಕಳೆದ 75 ವರ್ಷಗಳಿಂದ ಭಿಕ್ಷಾಟನೆ ಬಟ್ಟಲನ್ನು ಹಿಡಿದುಕೊಂಡು ಅಲೆದಾಡುತ್ತಿದ್ದೇವೆ ಎಂದು ಶರೀಫ್ ಹೇಳಿದ್ದಾರೆ. ಇದಲ್ಲದೇ ಪಾಕಿಸ್ತಾನದ ಆರ್ಥಿಕತೆಯು ಪ್ರವಾಹಕ್ಕೆ ಮುಂಚಿತವಾಗಿಯೇ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿತ್ತು, ಇದು ಅದನ್ನು ಹೆಚ್ಚು ಜಟಿಲಗೊಳಿಸಿದೆ ಅಂತ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!