ನಕ್ಸಲರು ಶರಣಾಗತಿಯಾಗಲೂ ನಾನೇ ಕರೆ ಕೊಟ್ಟಿದ್ದೇನೆ: ಸಿಎಂ ಸಿದ್ದರಾಮಯ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಕ್ಸಲರು ಶರಣಾಗತಿಯಾಗಲೂ ನಾನೇ ಕರೆ ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು. ಈ ವೇಳೆ ನಕ್ಸಲರು ಶರಣಾಗತಿಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಕ್ಸಲರು ಶರಣಾಗಬೇಕು ಎಂದು ನಾನೇ ಕರೆ ಕೊಟ್ಡಿದ್ದೆ‌. ಮುಖ್ಯವಾಹಿನಿಗೆ ಬರುವಂತೆ ನಾನೇ ಕರೆ ಕೊಟ್ಟಿದ್ದೆ. ಅವರು ಶರಣಾಗೋ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರ ಮನಸ್ಸು ಪರಿವರ್ತನೆ ಆಗಬಹುದು ಎಂದು ಅಂದುಕೊಂಡಿದ್ದೇನೆ. ಈ ಮೂಲಕ ನಕ್ಸಲರು ಶರಣಾಗತಿಯನ್ನ ಪರೋಕ್ಷವಾಗಿ ಅವರು ಸ್ವಾಗತಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!