ಬೀಫ್‌ ಸೇವನೆಗೆ ಪ್ರೋತ್ಸಾಹ ಕೊಡುವುದೇ I.N.D.I.A ಒಕ್ಕೂಟದ ಉದ್ದೇಶ: ಯೋಗಿ ಆದಿತ್ಯಾನಾಥ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ದೇಶಾದ್ಯಂತ ಗೋಮಾಂಸ ಸೇವನೆಯ ಹಕ್ಕನ್ನು ಒದಗಿಸುವುದು ಕಾಂಗ್ರೆಸ್‌ನ ಮುಖ್ಯ ಗುರಿಯಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಲಕ್ನೋದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹೇಳಿಕೆಯನ್ನು ಟೀಕಿಸಿದರು ಮತ್ತು ಗೋಮಾಂಸ ಸೇವನೆಯನ್ನು ಉತ್ತೇಜಿಸುವುದು I.N.D.I.A ಒಕ್ಕೂಟದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಗೋವನ್ನು ತಾಯಿ ಎಂದು ಗೌರವಿಸುವ ಹಿಂದೂಗಳು ಗೋಮಾಂಸ ಸೇವನೆಯನ್ನು ಬಲವಾಗಿ ವಿರೋಧಿಸುತ್ತಾರೆ. ಆದರೆ, ಕಾಂಗ್ರೆಸ್ ಮಾತ್ರ ಈ ನಿಟ್ಟಿನಲ್ಲಿ ಮುಸ್ಲಿಮರಿಗೆ ವಿನಾಯಿತಿಯನ್ನು ಕೊಡುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.

ಅಲ್ಪಸಂಖ್ಯಾತರಿಗೆ ಬೀಫ್‌ ಸೇವನೆಯ ಹಕ್ಕನ್ನು ನೀಡಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಗಮನಾರ್ಹ ವಿಚಾರ ಅಂದರೆ, ಉತ್ತರಪ್ರದೇಶದಲ್ಲಿ ಈಗಾಗಲೇ ಗೋಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಗೋವುಗಳ ಮೇಲೆ ಹಿಂಸಾಕೃತ್ಯಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ₹ 3 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಕಾವಿ ಮುಖವಾಡದ ಮನುವಾದ ಸಂವಿಧಾನ ವಿರೋಧಿ ದಲಿತ ಮತ್ತು ಹಿಂದುಳಿದ ವರ್ಗಗಳ ವಿರೋಧಿಗಳು, ಪುಣ್ಯಾತ್ಮನಿಗೆ ಭಾರತ ನಕಲಿ ದೇಶಭಕ್ತರ ಅವಧಿಯಲ್ಲಿ ಬೀಫ್ ರಫ್ತಿನಲ್ಲಿ ಜಗತ್ತಿನ ಮೂರನೇ ಸ್ಥಾನದಲ್ಲಿದೆ,,ರಪ್ತು ಉದ್ಯಮದಲ್ಲಿರುವವರು ನಿಮ್ಮ ಪಕ್ಷದ ಅಭಿಮಾನಿಗಳು ಮತ್ತು ಚಂದಾ ಕೊಡುವವರು,,, ಹೀಗೆ ಜನರ ತಲೆಗೆ ವಿಷ ತುಂಬಿ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರ್ಬುದ್ಧಿ ಬಿಟ್ಟು ಹಾಕಿಕೊಂಡಿರುವ ಕಾವಿಗೆ ಗೌರವ ಇರಲಿ

LEAVE A REPLY

Please enter your comment!
Please enter your name here

error: Content is protected !!