ಹೊಸದಿಗಂತ ಡಿಜಿಟಲ್ ಡೆಸ್ಕ್:
I-N-D-I-A ಒಕ್ಕೂಟ ಸಭೆ ಅಂತೂ ಪ್ರಮುಖ ನಾಯಕರ ಗೈರಿನೊಂದಿಗೆ ಅಂತ್ಯಗೊಂಡಿದೆ. ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಪ್ರಮುಖ ನಾಯಕರು ಗೈರಾಗಿದ್ದರು.
ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಯಾವುದೇ ಮಹತ್ವದ ನಿರ್ಣಯ ಆಗಿಲ್ಲ, ಜೊತೆಗೆ ಗಂಭೀರ ವಿಚಾರಗಳು ಚರ್ಚೆಯಾಗಿಲ್ಲ. ಈ ಬೆಳವಣಿಗೆ ನಡುವೆಯೆ ವಿಪಕ್ಷದ ಒಕ್ಕೂಟದ ಪಾಲುದಾರ ಜೆಡಿಯು ಪಕ್ಷದ ನಾಯಕ ಸಭೆ ಕೇವಲ ಚಾಯ್ ಮತ್ತು ಸಮೋಸಾಗೆ ಸೀಮಿತವಾಗಿದೆ ಎಂದಿದ್ದಾರೆ.
ಇದೀಗ ಜೆಡಿಯು ಸಂಸದ ಸುನಿಲ್ ಕುಮಾರ್ ಪಿಂಟು ಹೇಳಿಕೆ ವಿಪಕ್ಷಗಳಿಗೆ ಮುಜುಗುರ ತರಿಸಿದೆ. ಸಭೆಯಲ್ಲಿ ಯಾವುದೇ ಗಂಭೀರ ಚರ್ಚೆ ನಡೆಯತ್ತಿಲ್ಲ. ಸಭೆಗೂ ಮೊದಲೇ ವಿರೋಧ, ಅಪಸ್ವರ, ಮುನಿಸುಗಳು ಕಾಣಿಸಿಕೊಳ್ಳುತ್ತದೆ. ಬಳಿಕ ಕಾಟಾಚಾರಕ್ಕೆ ಸಭೆ ನಡೆಯುತ್ತದೆ. ಎಲ್ಲೀವರೆಗೆ ಸೀಟು ಹಂಚಿಕೆ ಆಗುವುದಿಲ್ಲವೋ ಅಲ್ಲೀವರೆಗೆ ಒಕ್ಕೂಟ ಸಭೆ ಚಾಯ್ ಮತ್ತು ಸಮೋಸಾಗೆ ಸೀಮಿತಗೊಳ್ಳಲಿದೆ ಎಂದು ಸುನಿಲ್ ಕುಮಾರ್ ಪಿಂಟು ಹೇಳಿದ್ದಾರೆ.
ಬಿಜೆಪಿ ಇಂದು ಪ್ರಧಾನಿ ಮೋದಿ ನಾಯಕತ್ವದಲ್ಲಿ ಅದ್ಭುತವಾಗಿ ಮುನ್ನಡೆಯುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತಿಸಘಡ ವಿಧಾನಸಭೆ ಚುನಾವಣೆ ಗೆದ್ದುಕೊಂಡಿದೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಅನ್ನೋ ಘೋಷ ವಾಕ್ಯದಂತೆ ಗೆಲುವು ಸಾಧಿಸುತ್ತಿದೆ ಎಂದಿದ್ದಾರೆ.
ಆರಂಭಿಕ 2 ಸಭೆಗಳಲ್ಲಿ 26ಕ್ಕೂ ಹೆಚ್ಚು ಪಕ್ಷದ ನಾಯಕರು ಇಂಡಿ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಪಂಚ ರಾಜ್ಯ ಸೋಲಿನ ಬಳಿಕ ನಡೆದ ಸಭೆಯಲ್ಲಿ 17 ಪಕ್ಷದ ನಾಯಕರು ಭಾಗಿಯಾಗಿದ್ದರು.