ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಕುಂಠ ಏಕಾದಶಿ ನಿಮಿತ್ತ ನಗರದ ದೇವಸ್ಥಾನದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಎಸ್.ಟಿ.ಸೋಮಶೇಖರ್ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಚುನಾವಣೆಯ ಸಂದರ್ಭದಲ್ಲಿ ತಮಗೆ ಬೇಕಿರುವ ಜನ ಬಂದು ಚುನಾವಣಾ ಖರ್ಚಿಗೆ ದುಡ್ಡು ನೀಡುತ್ತಾರೆ, ನಾನು ಚುನಾವಣೆಯಲ್ಲಿ ದೇಣಿಗೆ ನೀಡಿದವರ ಹಣವನ್ನು ಬಳಸಿದ್ದೇನೆ, ನಾನು ಸತ್ಯಹರಿಶ್ಚಂದ್ರ ಎಂದು ನಾನು ಎಂದಿಗೂ ಭಾವಿಸಿಲ್ಲ, ನಾನು ಎಂದಿಗೂ ಸಹಿ ಮಾರಾಟಕ್ಕಿಟ್ಟಿಲ್ಲ, ಈ ಸರ್ಕಾರ ಎಲ್ಲದಕ್ಕೂ ಬೆಲೆ ನಿಗದಿ ಮಾಡಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.