ಲಾಸ್‌ ಏಂಜಲಿಸ್‌ ನಡುಗಿಸಿದ ʼವೈಲ್ಡ್‌ ಫೈರ್‌ʼ ಕಾಳ್ಗಿಚ್ಚು ಕಡಿಮೆಯಾಗುವ ಲಕ್ಷಣವೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಮೆರಿಕದ ಲಾಸ್‌ ಏಂಜಲಿಸ್‌ ಪ್ರದೇಶದಲ್ಲಿ ಹಬ್ಬಿರುವ ಕಾಳ್ಗಿಚ್ಚು ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಲಾಸ್‌ ಏಂಜಲಿಸ್‌ ವೆಸ್ಟ್‌ ಹಿಲ್ಸ್‌ ಪ್ರದೇಶಕ್ಕೂ ಕಾಳ್ಗಿಚ್ಚು ವ್ಯಾಪಕವಾಗಿ ಹಬ್ಬಿದೆ.

Crews battle fire in Hollywood Hills, knock down Studio City fire - Los Angeles Timesಲಾಸ್ ಏಂಜಲಿಸ್‌ನ ವೆಸ್ಟ್ ಹಿಲ್ಸ್ ನೆರೆಹೊರೆಯಲ್ಲಿ ಗುರುವಾರ ಸಂಜೆ ಹೊತ್ತಿಗೆ ಹೊಸದಾಗಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ 900 ಎಕರೆಗಳಷ್ಟು ಜಮೀನನ್ನು ಸರ್ವನಾಶ ಮಾಡಿದೆ. ಅಗ್ನಿಶಾಮಕ ದಳದವರು ದಕ್ಷಿಣ ಕ್ಯಾಲಿಫೋರ್ನಿಯಾದಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದು, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ಸಾಮೂಹಿಕ ಸ್ಥಳಾಂತರಿಸುವಿಕೆ ಕಾರ್ಯಕ್ಕೆ ಮುಂದಾಗಿದ್ದಾರೆ.

ಪೆಸಿಫಿಕ್ ಪಾಲಿಸೇಡ್ಸ್ ಭಾಗದಲ್ಲೂ ಕಾಡ್ಗಿಚ್ಚು ಹಬ್ಬಿದ್ದು, ಸುಮಾರು 19,000 ಎಕರೆ ಜಮೀನನ್ನು ಸುಟ್ಟುಹಾಕಿದೆ. ಅದೇ ರೀತಿ ಅಲ್ಟಾಡೆನಾ ಪ್ರದೇಶದ 13,000 ಎಕರೆ ಭೂಮಿ ಬೆಂಕಿಗೆ ಆಹುತಿಯಾಗಿದೆ.

ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಪೆಸಿಫಿಕ್ ಪಾಲಿಸೇಡ್ಸ್ ಮತ್ತು ಅಲ್ಟಾಡೆನಾ ಸೇರಿವೆ. ಪ್ಯಾರಿಸ್ ಹಿಲ್ಟನ್, ಆಂಥೋನಿ ಹಾಪ್ಕಿನ್ಸ್ ಮತ್ತು ಬಿಲ್ಲಿ ಕ್ರಿಸ್ಟಲ್ ಅವರಂತಹ ಪ್ರಸಿದ್ಧ ವ್ಯಕ್ತಿಗಳ ಮನೆಗಳೂ ಕೂಡ ಬೆಂಕಿಗೆ ಆಹುತಿಯಾಗಿವೆ. ಸುಮಾರು 180,000 ನಿವಾಸಿಗಳು ಈಗಲೂ ಕಾಡ್ಗಿಚ್ಚಿನ ಪ್ರಭಾವಲಯದಲ್ಲಿ ಸಿಲುಕಿದ್ದು, ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Los Angeles wildfires: Why is fire in Hollywood town LA so bad? 'Santa Ana' winds explained | World News - Hindustan Timesಕ್ಯಾಲಿಫೋರ್ನಿಯಾ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಘೋರ ಕಾಳ್ಗಿಚ್ಚು ಎಂದು ಬಣ್ಣಿಸಿರುವ ಅಮರಿಕದ ಅಧ್ಯಕ್ಷ ಜೋ ಬೈಡನ್‌, ಕ್ಯಾಲಿಫೋರ್ನಿಯಾಗೆ ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿರುವುದಾಗಿ ಹೇಳಿದ್ದಾರೆ.

ಈ ಭೀಕರ ಕಾಳ್ಗಿಚ್ಚು ಅಮೆರಿಕದಲ್ಲಿ ರಾಜಕೀಯ ಘರ್ಷಣೆಗೂ ಕಾರಣವಾಗಿದೆ. ಗವರ್ನರ್ ನ್ಯೂಸಮ್ ಅವರ ಕಾರ್ಯವೈಖರಿಯನ್ನು ಟೀಕಿಸಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಾಳ್ಗಿಚ್ಚು ನಂದಿಸಲು ಲಭ್ಯ ಇರುವ ನೀರಿನ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ರಾಷ್ಟ್ರೀಯ ವಿಪತ್ತನ್ನು ರಾಜಕೀಯಗೊಳಿಸುವುದು ಬೇಡ ಎಂದು ಅಧ್ಯಕ್ಷ ಜೋ ಬೈಡನ್‌ ಮನವಿ ಮಾಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!