ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ದರ್ಶನ್ ನನ್ನು ಬಂಧಿಸಲಾಗಿತ್ತು. ದರ್ಶನ್ ಪ್ರಕರಣದ ಬಗ್ಗೆ ಕನ್ನಡದ ಹಲವು ನಟ-ನಟಿಯರು ಮಾತನಾಡಿದ ನಂತರ, ನಟಿ ಸ್ಪೂರ್ತಿ ವಿಶ್ವಾಸ್ ಕೂಡ ಮಾತನಾಡಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು ಎಂದು ನಟಿ ತಿಳಿಸಿದ್ದಾರೆ.
ಇದು ಬಹಳ ಸೂಕ್ಷ್ಮವಾದ ವಿಷಯ. ಈ ಪ್ರಕರಣದ ಬಗ್ಗೆ ಕೇಳಿದಾಗ ನಂಬಲು ಕಷ್ಟವಾಯಿತು. ನಾನು ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ವ್ಯಕ್ತಿತ್ವ ಅಷ್ಟು ಕ್ರೂರವಾಗಿಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ. ಅದರಂತೆ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಗೆ ಗುರಿಯಾಗಬೇಕು. ದರ್ಶನ್ ಅಣ್ಣ ಆದಷ್ಟು ಬೇಗೆ ಬಿಡುಗಡೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ನಟಿ.