ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾನು ಅಧಿಕಾರಕ್ಕೆ ಬಂದರೆ ಫ್ರಾನ್ಸಿನ ಮುಸ್ಲಿಮರು ಹಿಜಾಬ್, ಬುರ್ಖಾ, ಪೇಟ ಧರಿಸಿದರೆ ದಂಡ ವಿಧಿಸಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಹೇಳಿದ್ದಾರೆ. ಇನ್ನು ಮೂರು ದಿನಗಳಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ರ್ಯಾಲಿ ಪಾರ್ಟಿ (ಹಿಂದೆ ನ್ಯಾಷನಲ್ ಫ್ರಂಟ್) ಪರವಾಗಿ ಮರೀನ್ ಲೆ ಪೆನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.
ಬುರ್ಖಾ ಮತ್ತು ಪೇಟ ಧರಿಸುವ ಮುಸ್ಲಿಮರಿಗೆ ದಂಡ ವಿಧಿಸುವ ವಿಧಾನವನ್ನು ಮರೀನ್ ಲೆ ಪೆನ್ ವಿವರಿಸಿದರು. ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದವರಿಗೆ ದಂಡ ವಿಧಿಸುವಂತೆ, ಹಿಜಾಬ್ ಧರಿಸುವವರಿಗೆ ಪೊಲೀಸರು ದಂಡ ವಿಧಿಸುತ್ತಾರೆ ಎಂದರು. ಪೊಲೀಸರು ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಾರೆ ಎಂದು ನಾನು ಭಾವಿಸುತ್ತೇನೆ, ಎಂಬ ಅಭಿಪ್ರಾಯ ಹೊರಹಾಕಿದ್ರು. ಪಶ್ಚಿಮ ಯುರೋಪ್‌ನಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಫ್ರಾನ್ಸ್‌ನಲ್ಲಿ, ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯ ಹೆಚ್ಚಿದೆ. ತಾನು ಪ್ರತಿಪಾದಿಸಿದ ನೀತಿಗಳು ಎಲ್ಲರೂ ಒಪ್ಪುವಂತದ್ದು, ಇತ್ತೀಚೆಗೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುವ ಪ್ರಕರಣಗಳು ನಡೆಯುತ್ತಿವೆ. ಇದೆಲ್ಲವನ್ನು ನಾನು ಜನಾಭಿಪ್ರಾಯಕ್ಕೆ ಬಿಡುತ್ತೇನೆ ಎಂಬ ಮಾತನ್ನು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ