ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಹೆಸರಿಡುವ ಕುರಿತ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಕಾಂಗ್ರೆಸ್ ಶಾಸಕರು (Congress MLA) ಹಾಗೂ ನಗರ ಸಭೆ ಸದಸ್ಯರುಗಳು ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವಂತೆ ಮಹಾನಗರ ಪಾಲಿಕೆಗೆ ಮನವಿ ನೀಡಿದ್ದರು. ಇದಾದ ಬಳಿಕ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿತ್ತು.
ಇದೀಗ ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಪ್ರಿನ್ಸೆಸ್ ರಸ್ತೆಗೆ ನನ್ನ ಹೆಸರಿಡಿ ಅಂತ ನಾನು ಎಲ್ಲೂ ಹೇಳಿಲ್ಲ. ಈ ಹಿಂದೆ ನನಗೆ ಡಾಕ್ಟರೇಟ್ ಕೊಡುವುದಾಗಿ ಹೇಳಿದ್ದಾಗಲೇ ಬೇಡ ಎಂದಿದ್ದೆ. ನನಗೆ ಡಾಕ್ಟರೇಟ್ ತಗೋಳ್ಳೋ ಯೋಗ್ಯತೆ ಇಲ್ಲ ಅಂತ ನಾನೇ ಹೇಳಿದ್ದೆ. ರಸ್ತೆಗೆ ಹೆಸರಿಡುವ ಬಗ್ಗೆ ನನ್ನನ್ನು ಯಾರೂ ಕೇಳಿಲ್ಲ, ಯಾರು ನನಗೆ ಏನು ಹೇಳಿಲ್ಲ. ಆ ರಸ್ತೆಗೆ ಹೆಸರಿದ್ರೆ ಬದಲಾವಣೆ ಬೇಡ ಎಂದು ಸ್ಪಷ್ಟನೆ ನೀಡಿದರು.