March 11, 2026
Wednesday, March 11, 2026
spot_img

DAILY MOTIVATION | ಈ ವಸ್ತು-ವಿಷಯಗಳಿಗೆ ನಿತ್ಯವೂ ಥ್ಯಾಂಕ್ಸ್‌ ಹೇಳ್ಬೇಕಂತೆ! ಒಂದು ದಿನವಾದ್ರೂ ಹೇಳಿದ್ದೀರಾ?

ಬೆಳಗ್ಗೆ ಎದ್ದ ತಕ್ಷಣ ಅಯ್ಯೋ ಇವತ್‌ ಸ್ಕೂಲು, ಕಾಲೇಜು, ಆಫೀಸ್‌ ಹೋಗ್ಬೇಕಲ್ಲಾ ಅಂತ ಎದ್ದೇಳ್ತೀರಾ? ಗೃಹಿಣಿಯರು ಅಷ್ಟೇ ಇವತ್‌ ಏನ್‌ ತಿಂಡಿ? ಮತ್ತದೇ ಮನೆಕೆಲಸ, ಅದೇ ಅಡುಗೆ ಅಂತ ಬೇಸರಿಸಿಕೊಂಡೇ ಏಳ್ತೀರಾ?

ಇನ್ಮೇಲೆ ಈ ಮನಸ್ಥಿತಿಯಲ್ಲಿ ಖಂಡಿತ ಏಳಬೇಡಿ, ರಾತ್ರಿ ಮಲಗಿದ ಎಷ್ಟೋ ಮಂದಿ ಬೆಳಗ್ಗೆ ಏಳೋದಿಲ್ಲ, ಬೆಳಗ್ಗೆ ಎದ್ದಾಗ ಬಿಸಿ ನೀರಿನಲ್ಲಿ ಸ್ನಾನ ಮಾಡೋಕಾಗದವರೂ ಇದ್ದಾರೆ. ಇಂದು ಊಟಕ್ಕೆ ಏನು ಮಾಡೋದು ಅನ್ನೋ ಚಿಂತೆ ಅಲ್ಲ, ಊಟಕ್ಕೆ ಹಣವಿಲ್ಲ ಎಂದು ಏಳುವವರೂ ಇದ್ದಾರೆ. ನೀವು ಕಿರಿಕಿರಿ ಮಾಡಿಕೊಳ್ಳುವ ಆಫೀಸ್‌ನಲ್ಲಿ ಕೆಲಸ ಸಿಕ್ಕರೆ ಸಾಕಪ್ಪ ಎಂದು ಕಾಯುತ್ತಿರುವ ಎಷ್ಟೋ ಜನರಿದ್ದಾರೆ. ನಿಮ್ಮ ಬಳಿ ಏನಿದೆಯೋ ಅದಕ್ಕೆ ಖುಷಿಪಡಿ.

ಬೆಳಗ್ಗೆ ಎದ್ದ ನಿಮ್ಮನ್ನು ಮುದ್ದುಮಾಡಿ ಸ್ನಾನಕ್ಕೆ ದೂಡುವ ಅಮ್ಮ ಎಷ್ಟೋ ಮಂದಿಗೆ ಇಲ್ಲ! ತನಗೆ ಐದು ನಿಮಿಷ ಲೇಟಾಗಿ ಬಾಸ್‌ ಬೈತಾರೆ ಅಂತ ಗೊತ್ತಿದ್ರೂ ನಿಮ್ಮನ್ನು ಸ್ಕೂಲ್‌ ಗೇಟ್‌ ಒಳಕ್ಕೇ ಬಿಟ್ಟು ಹೋಗುವ ತಂದೆ ಎಷ್ಟೋ ಮಂದಿಗೆ ಇಲ್ಲ! ತಲೆಮೇಲಿನ ಸೂರು ಇಲ್ಲದೆ ರಸ್ತೆ ಬದಿ ಬದುಕುವ ಜನರಿದ್ದಾರೆ. ಶಾಲೆ ಗೇಟ್‌ ಬಳಿ ನಿಂತು ಆಸೆ ಕಣ್ಣಲ್ಲಿ ನೋಡೋ ಮಕ್ಕಳಿದ್ದಾರೆ.

ನಿಮ್ಮ ಬಳಿ ಇರುವ ಈ ಜೀವನ ಬೆಸ್ಟ್‌, ನಿಮಗಿಂತ ಮೇಲಿದ್ದಾರೆ ಎಂದೆನಿಸುವ ಜನರನ್ನು ನೋಡಿ ಹಠ ಕಲಿಯಿರಿ, ನಿಮಗಿಂತ ಕೆಳಗಿದ್ದಾರೆ ಎಂದೆನಿಸುವ ಜನರನ್ನು ನೋಡಿ ಜೀವನ ಕಲಿಯಿರಿ. ಬೆಳಗ್ಗೆ ಎದ್ದದ್ದಕ್ಕೆ, ಪ್ರೀತಿಸುವ ಕುಟುಂಬಕ್ಕೆ, ಹಣ ಕೊಡುವ ಕೆಲಸಕ್ಕೆ, ವಿದ್ಯೆ ಕೊಡುವ ಪಾಠಶಾಲೆಗೆ, ಮಕ್ಕಳನ್ನು ಕಳಿಸಿ, ಮನೆ ಕ್ಲೀನ್‌ ಮಾಡಿ ಟಿವಿ ಆನ್‌ ಮಾಡಿ ಕೂರುವ ಆ ನೆಮ್ಮದಿಯ ಘಳಿಗೆಗೆ ಧನ್ಯವಾದ ಹೇಳಿ.

ಇಂದು ಎಲ್ಲರಿಗೂ ಉತ್ತಮ ಅನುಭವ, ಪಾಠಗಳೇ ಸಿಗಲಿ, ದಿನ ಚೆನ್ನಾಗಿರಲಿ..
ಶುಭೋದಯ 🌞

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !