ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶರಾಗಿದ್ದು, ನಟ ಉಪೇಂದ್ರ ಕಂಬನಿ ಮಿಡಿದಿದ್ದಾರೆ. ಜನಾರ್ಧನ್ ಅವರಿಗಾಗಿ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ತಮ್ಮ ಅದ್ಭುತ ಅಭಿನಯದಿಂದ ನನ್ನ ಸಿನಿಪಯಣದಲ್ಲಿ ಯಶಸ್ವಿ ಹೆಜ್ಜೆ ಇಡಲು ಕಾರಣಕರ್ತರಾದವರು.‘ತರ್ಲೆ ನನ್ಮಗ’ ಸಿನಿಮಾದಲ್ಲಿ ಬ್ಯಾಂಕ್ ಜನಾರ್ಧನ್‌ಗೆ ಉಪೇಂದ್ರ ನಿರ್ದೇಶನ ಮಾಡಿದ್ದರು. ಹೀಗಾಗಿ ಅವರನ್ನು ನಟ ಸ್ಮರಿಸಿ ಪೋಸ್ಟ್ ಶೇರ್ ಮಾಡಿದ್ದಾರೆ. ‘ತರ್ಲೆ ನನ್ಮಗ, ಶ್ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ನನ್ನ ಸಿನಿ ಪಯಣದಲ್ಲಿ ಯಶಸ್ವಿ ಹೆಜ್ಜೆ ಇಡಲು ಕಾರಣಕರ್ತರಾದ ಸರಳ, ಸ್ನೇಹ ಜೀವಿ, ಅಪರೂಪದ ಕಲಾವಿದ ಬ್ಯಾಂಕ್ ಜನಾರ್ಧನ್. ಬೇರೆ ಪಾತ್ರಕ್ಕೆ ಸಜ್ಜಾಗಿ ಬರಲು ವಿಧಿವಶರಾಗಿದ್ದಾರೆ. ಬೇಗ ಬನ್ನಿ ಸಾರ್ ಎಂದಿದ್ದಾರೆ.