ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋನು ನಿಗಮ್, ಸಲೀಮ್ ಮರ್ಚೆಂಟ್ ಹಾಗೂ ಸಂಚಿತ್ ಹೆಗ್ಡೆ ಕಾಂಬಿನೇಷನ್‌ನಲ್ಲಿ ಮೂಡಿಬಂದ ಮಾಯಾವಿ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ.
ಇಂಟರ್‌ವ್ಯೂ ಒಂದರಲ್ಲಿ ಸೋನು ನಿಗಮ್‌ಗೆ ಇಂಟ್ರೆಸ್ಟಿಂಗ್ ಪ್ರಶ್ನೆಯೊಂದು ಎದುರಾಗಿದೆ. ಈವರೆಗೂ ಯಾವುದೋ ಒಂದು ಹಾಡು ಅದನ್ನು ನಾನು ಹಾಡ್ಬೇಕಿತ್ತು ಅಂತ ಅನಿಸಿದ್ರೆ ಅದು ಯಾವುದು ಎಂದು ಕೇಳಿದ್ದಾರೆ.
ಅದಕ್ಕೆ ಸೋನು ನಿಗಮ್ ಬಚ್ನಾ ಏ ಹಸೀನೋ ಸಿನಿಮಾದ ʼಖುದಾ ಜಾನೇʼ ಹಾಡನ್ನು ಕೆಕೆ ಹಾಡಿದ್ದಾರೆ. ಅದ್ಭುತವಾಗಿದೆ. ಆ ಹಾಡಿನ ಚಾನ್ಸ್ ಸಿಕ್ಕಿದ್ರೆ ನಾನು ಹಾಡ್ತಿದ್ದೆ. ಕೆಕೆ ಅವರಷ್ಟು ಚೆನ್ನಾಗಿ ಹಾಡೋದು ಕಷ್ಟ ಬಟ್ ಪ್ರಯತ್ನ ಪಡ್ತಿದ್ದೆ ಎಂದು ಹೇಳಿದ್ದಾರೆ.