ಸಿಗರೇಟ್ ಸೇದಬೇಡ ಹೇಳಿದ್ದೆ ತಪ್ಪು: ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದನು!

ಹೊಸದಿಗಂತ ವರದಿ, ಮೈಸೂರು:

ಕಚೇರಿಯ ಬಾಗಿಲ ಬಳಿ ನಿಂತು ಸಿಗರೇಟ್ ಸೇದುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಬುದ್ಧಿವಾದ ಹೇಳಿದ ಮೈಸೂರು ಮಹಾನಗರಪಾಲಿಕೆಯ ಅಧಿಕಾರಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.

ಕುಂಬಾರಕೊಪ್ಪಲು ನಿವಾಸಿ ಧನುಷ್ ಎಂಬಾತ ಹಲ್ಲೆ ನಡೆಸಿದ್ದು, ಇದೀಗ ಆತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಧನುಷ್ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಬಾಗಿಲ ಬಳಿ ನಿಂತು ಸಿಗರೇಟ್ ಸೇದುತ್ತಿದ್ದು. ಇದನ್ನು ಗಮನಿಸಿದ ನಗರಪಾಲಿಕೆಯ ಕಂದಾಯ ಅಧಿಕಾರಿ ನಂದಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರಿ ಕಚೇರಿ ಹತ್ತಿರ ಸಿಗರೇಟ್ ಸೇದಬಾರದೆಂದು ಬುದ್ದಿ ಹೇಳಿದ್ದಾರೆ.ಇದರಿಂದ ಸಿಟ್ಟಿಗೆದ್ದ ಧನುಷ್ ಕಚೇರಿ ಒಳಗೆ ನುಗ್ಗಿ, ನಂದಕುಮಾರ್‌ರನ್ನು ಸಹದ್ಯೋಗಿಗಳ ಮುಂದೆ ಅವ್ಯಾಚ ಶಬ್ಧಗಳಿಂದ ನಿಂದಿಸುತಾ, ಕತ್ತಿನಪಟ್ಟಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ನಂದಕುಮಾರ್ ನೀಡಿದ ದೂರಿನ ಮೇಲೆ ಧನುಷ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಆತನನ್ನು ಬಂಧಿಸಬೇಕು, ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ನಗರಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!